ಟೆಕ್ಕಿಯಿಂದ ಮನೆಗೆಲಸದಾಕೆಗೆ ಕಿರುಕುಳ
ಬೆಂಗಳೂರು,
ಮಾ. 9 : ಮನೆಗೆಲಸದ ಯುವತಿ ಮೇಲೆ ಹಲ್ಲೆ ನಡೆಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, 20 ವರ್ಷದ ಆಸ್ಸಾಂ ಮೂಲದ ಯುವತಿ ಮೇಲೆ ಸಾಫ್ಟ್ ವೇರ್ ಇಂಜಿನಿಯರ್ ಮತ್ತು ಆತನ ಪತ್ನಿ ಸೇರಿಕೊಂಡು ತೀವ್ರವಾಗಿ ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. id="toptextpromo">ಉಷಾ
ದೋಪ್ನಾ(20) ಹಲ್ಲೆಗೊಳಿದಾದ ನತದೃಷ್ಟೆ. ಸಂದೀಪ ವಾಟ್ಸ್ ಮತ್ತು ರೋಸ್ಕಿ ವಾಟ್ಸ್ ಮನೆಗೆಲಸದ ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳು. ಮೂಲತಃ ಆಸ್ಸಾಂನ ಟಿಗಾರ್ಡನ್ ಪ್ರದೇಶದವರಾದ ಉಷಾ ದೋಪ್ನಾ ಕೆಲಸ ಅರಸಿ ದೆಹಲಿಗೆ ತೆರಳಿದ್ದಾರೆ. ಅಲ್ಲಿರುವ ಏಜೆನ್ಸಿ ಮೂಲತ ಮನೆಗೆಲಸದ ಗಿಟ್ಟಿಸಿಕೊಂಡ ಉಷಾ, ಕಳೆದೆರಡು ವರ್ಷಗಳಿಂದ ಟೆಕ್ಕಿ ಸಂದೀಪ ವಾಟ್ಸ್ ಅವರ ಅವರು ನಡೆಸುತ್ತಿರುವ ಮಕ್ಕಳ ಪಾಲನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಹೊಟ್ಟೆ
ಪಾಡಿಗಾಗಿ ಎರಡು ವರ್ಷಗಳಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಸಹಿಸಿಕೊಂಡು ಕೆಲಸ ಮಾಡಿದ ಉಷಾ ಕೊನೆಗೂ ಈ ನರಕದಿಂದ ಬೇಸತ್ತು ಮನೆಗೆಲಸಗಾರರ ಒಕ್ಕೂಟ ಹಾಗೂ ಸ್ತ್ರೀ ಜಾಗೃತಿ ಸಮಿತಿಯ ಮೊರೆ ಹೋಗಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ಉಷಾ ಕಳೆದ ಎರಡು ವರ್ಷಗಳಿಂದ ಮಾಲೀಕರ ಕಿರುಕುಳದಿಂದ ತೀವ್ರ ಯಾತನೆ ಅನುಭವಿಸಿದ್ದು, ಪ್ರಕರಣ ತಿಳಿಯುತ್ತಿದ್ದಂತೆಯೇ ಆಕೆಯನ್ನು ಅಲ್ಲಿಂದ ಬಿಡುಗಡೆ ಮಾಡಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಗೀತಾ ಮೆನನ್ ತಿಳಿಸಿದ್ದಾರೆ. ಟೆಕ್ಕಿ ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತಿಳಿದುಬಂದಿಲ್ಲ.











Click it and Unblock the Notifications