ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾರ್ಚ್ 15 ವಿಶ್ವ ಗ್ರಾಹಕರ ದಿನಾಚರಣೆ
ಮೈಸೂರು, ಮಾ.6 : ಸಾರ್ವಜನಿಕರಲ್ಲಿ ಗ್ರಾಹಕರ ಹಕ್ಕು ಬಾದ್ಯತೆಗಳ ಕುರಿತು ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರು ಜಿಲ್ಲಾ ಆಡಳಿತದ ವತಿಯಿಂದ ಆ ದಿನದಂದು ನಗರದ ವಾರ್ತಾ ಭವನದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಏರ್ಪಡಿಸಲು ಇಂದು ಆಹಾರ ಇಲಾಖೆ ಉಪನಿರ್ದೇಶಕ ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಶ್ವ ಗ್ರಾಹಕರ ದಿನಾಚರಣೆ ದಿನದಂದು ಜಿಲ್ಲೆಯ ಆಯ್ದ 20 ಶಾಲೆಗಳಲ್ಲಿ ಶಾಲಾ ಗ್ರಾಹಕರ ಸಂಘಗಳನ್ನು ಆರಂಭಿಸಲಾಗುತ್ತಿದೆ. ಅಂದು ವಾರ್ತಾ ಭವನದ ಆವರಣದಲ್ಲಿ, ಸುರಕ್ಷಿತ ಅಡುಗೆ ಅನಿಲ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದೆಂದು ಉಪನಿರ್ದೇಶಕರು ತಿಳಿಸಿದರು.
ಗ್ರಾಹಕ ಸಂಬಂಧ ಹೊಂದಿರುವ ಎಲ್ಲಾ ಇಲಾಖೆಗಳ ಸಂಘ ಸಂಸ್ಥೆಗಳು ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತ ಅವರು ಮನವಿ ಮಾಡಿದ್ದಾರೆ.
ವಿಶ್ವ ಗ್ರಾಹಕರ ದಿನಾಚರಣೆ ಕೇವಲ ನಗರ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗದೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಮಾರ್ಚ್ 15ರಂದು ವಿಶಿಷ್ಟವಾಗಿ ಗ್ರಾಹಕರ ದಿನಾಚರಣೆ ಆಚರಿಸುವ ಮೂಲಕ ಗ್ರಾಮೀಣ ಜನರಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸೂಕ್ತ ಕ್ರಮ ವಹಿಸುವುದಾಗಿ ಶಿವಣ್ಣ ಅವರು ಸಭೆಗೆ ತಿಳಿಸಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ ಮಾರ್ಚ್ 19-20ರಂದು ಎರಡು ದಿನಗಳ ಗ್ರಾಹಕರ ಜಾಗೃತಿ ಕುರಿತ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಶಿವಣ್ಣ ಸಭೆಯಲ್ಲಿ ತಿಳಿಸಿದರು.