ಗೋಹತ್ಯೆ ನಿಷೇಧ ವಿಧೇಯಕ ವಾಪಸ್
ಬೆಂಗಳೂರು,
ಮಾ. 4 : ತೀವ್ರ ಪ್ರತಿರೋಧದ ಹಿನ್ನಲೆಯಲ್ಲಿ ವಿವಾದಿತ ಗೋಹತ್ಯೆ ನಿಷೇಧ ವಿಧೇಯಕವನ್ನು ಸರಕಾರ ವಿಧಾನಸಭೆಯಲ್ಲಿ ಹಿಂತೆಗೆದುಕೊಳ್ಳುವ ಮೂಲಕ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ವಿಫಲವಾಗಿದೆ. ಎಷ್ಟೇ ವಿರೋಧ ವ್ಯಕ್ತವಾದರೂ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡಿಸಿಯೇ ತೀರುತ್ತೇವೆ ಎಂದು ಸರಕಾರ ಈ ಹಿಂದೆ ಹೇಳಿತ್ತು. id="toptextpromo">ವಿಧೇಯಕ
ಹಿಂಪಡೆಯಲು ಸರಕಾರ ಯಾವುದೇ ಕಾರಣ ನೀಡಿಲ್ಲ. ಆದರೆ ಕರಡು ವಿಧೇಯಕದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿ ಮರುಮಂಡಿಸಲು ಸರಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಪ್ರತಿಪಕ್ಷಗಳ ಒತ್ತಾಯದ ನಡುವೆಯೂ ಸಂಸದೀಯ ವ್ಯವಹಾರ ಮತ್ತು ಕಾನೂನು ಸಚಿವ ಸುರೇಶ ಕುಮಾರ್ ಸಮಜಾಯಿಷಿ ನೀಡದೆ 'ಕಾನೂನಿನಲ್ಲಿ ವಿಧೇಯಕವನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ' ಎಂದಷ್ಟೇ ಹೇಳಿದ್ದಾರೆ. ಸ್ಪೀಕರ್ ಕೂಡ ಸರಕಾರ ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ವಿಧಾನಸಭೆಯಲ್ಲಿ ಚರ್ಚೆಗೆ ತೆರೆಎಳೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸದ್ಯ
ಜಾರಿಯಲ್ಲಿರುವ ಕಾನೂನಿಂದ ಗೋರಕ್ಷಣೆ ಅಸಾಧ್ಯ ಇದಕ್ಕೆ ಕಟ್ಟುನಿಟ್ಟಿನ ಕಾನೂನು ಅಗತ್ಯ ಎಂದು ಸರಕಾರ ಗೋಹತ್ಯೆ ನಿಷೇಧ ಜಾರಿಗೆ ತರಲು ಮುಂದಾಗಿತ್ತು. ಆದರೆ ಅಲ್ಪಸಂಖ್ಯಾತರು, ದಲಿತರು, ರಾಜ್ಯ ರೈತಸಂಘ, ಪ್ರಗತಿಪರ ಸಂಘಟನೆಗಳು ಮತ್ತು ಪ್ರತಿಪಕ್ಷಗಳು ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.











Click it and Unblock the Notifications