ಪೈಗಂಬರರ ಬಗ್ಗೆ ಲೇಖನ ವಿರೋಧಿಸಿ ಪ್ರತಿಭಟನೆ

ಮೊಹ್ಮದ್ ಪೈಗಂಬರರ ಹುಟ್ಟಹಬ್ಬದ ದಿನವಾದ ಈದ್ ಮಿಲಾದ್ ಪ್ರಯುಕ್ತವಾಗಿ ಪೈಗಂಬರರ ಕುರಿತಾಗಿ ದಿನಪತ್ರಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದೆ. ಇದರಿಂದ ರೊಚ್ಚಿಗೆದ್ದ ಮುಸ್ಲಿಂ ಸಂಘಟನೆಗಳು ಹಾಸನ ಬಂದ್ ಕರೆ ಕೊಟ್ಟಿವೆ. ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ. ಬಸ್ ನ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಬಿಗುವಿನ ವಾತಾವರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.











Click it and Unblock the Notifications