ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಕಿ ತಂಡದ ದಿಗ್ವಿಜಯ, ಬಹುಮಾನಗಳ ಸುರಿಮಳೆ

By Mrutyunjaya Kalmat
|
Google Oneindia Kannada News

Hockey india
ನವದೆಹಲಿ, ಮಾ 1 : ಇಲ್ಲಿನ ಧ್ಯಾನಚಂದ್ ಮೈದಾನದಲ್ಲಿ ಆರಂಭಗೊಂಡ 12ನೇ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭರ್ಜರಿ 4 -1 ಅಂತರದಿಂದ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಆಡುವ ಮೂಲಕ ಕರ್ನಾಟಕದ ಅರ್ಜುನ್ ಹಾಲಪ್ಪ 200ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಾಧನೆ ಮಾಡಿದರು.

ವಿಶ್ವಕಪ್ ಹಾಕಿಯಲ್ಲಿ ಆರಂಭಿಕ ಪಂದ್ಯವನ್ನು ಸಾಂಪ್ರದಾಯಕ ಎದುರಾಳಿ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ ಭಾರತ ಹಾಕಿ ತಂಡದ ಸದಸ್ಯರಿಗೆ ಸಹರಾ ಇಂಡಿಯಾ ತಲಾ 2 ಲಕ್ಷ ಮತ್ತು ಭಾರತದ ಸರಕಾರ ತಲಾ 1 ಲಕ್ಷ ರುಪಾಯಿ ಬಹುಮಾನ ಘೋಷಿಸಿದೆ.

ವಿಡಿಯೋ: ಪಾಕ್ ತಂಡವನ್ನು ಬಗ್ಗು ಬಡಿದ ಹಾಕಿ ಇಂಡಿಯಾ

ಬಹು ನಿರೀಕ್ಷಿತ ಹೈವೋಲ್ಟೇಜ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜ್ಪಾಲ್ ಸಿಂಗ್ ನೇತೃತ್ವದ ಭಾರತ ಸ್ಪೂರ್ತಿದಾಯಕ ಪ್ರದರ್ಶನ ನೀಡಿತು. ಭಾರತೀಯರ ಕೆಚ್ಚೆದೆ ದಾಳಿಗೆ ಪಾಕ್ ಕಕ್ಕಾಬಿಕ್ಕಿಯಾಗಿ ಸುಲಭವಾಗಿ ಶರಣಾಯಿತು. ಭಾರತದ ಪರ 27ನೇ ನಿಮಿಷದಲ್ಲಿ ಶಿವೇಂದ್ರ ಸಿಂಗ್, 35ನೇ ಮತ್ತು 57ನೇ ನಿಮಿಷದಲ್ಲಿ ಸಂದೀಪ್ ಸಿಂಗ್, 37ನೇ ನಿಮಿಷದಲ್ಲಿ ಪ್ರಭಜೋತ್ ಸಿಂಗ್ ಗೋಲು ಭಾರಿಸಿದರೆ ಪಾಕ್ ಪರ 59ನೇ ನಿಮಿಷದಲ್ಲಿ ಸೊಹೇಲ್ ಅಬ್ಬಾಸ್ ಏಕೈಕ ಗೋಲು ದಾಖಲಿಸಿದರು.

ಭಾನುವಾರ (ಫೆ 28 ) ನಡೆದ ಇತರ ಎರಡು ಪಂದ್ಯದಲ್ಲಿ ಸ್ಪೇನ್ ದಕ್ಷಿಣ ಆಫ್ರಿಕಾ ತಂಡವನ್ನು 4 -2 ಗೋಲುಗಳಿಂದ ಮಣಿಸಿದರೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ತಂಡವನ್ನು 3 -1 ಅಂತರದಿಂದ ಸೋಲಿಸಿತು. ಭಾರತ ತಂಡ ಮಾರ್ಚ್ 2ರಂದು ಆಸ್ಟ್ರೇಲಿಯಾ, ಮಾರ್ಚ್ 4ರಂದು ಸ್ಪೇನ್, ಮಾರ್ಚ್ 6ರಂದು ಇಂಗ್ಲೆಂಡ್, ಮಾರ್ಚ್ 8ರಂದು ದಕ್ಷಿಣ ಆಫ್ರಿಕಾ ವಿರುದ್ದ ತನ್ನಪಂದ್ಯವನ್ನಾದಲಿದೆ. ಮಾರ್ಚ್ 11ರಂದು ಸೆಮಿ ಫೈನಲ್ ಮತ್ತು ಮಾರ್ಚ್ 13ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯವು ಟೆನ್ ಸ್ಪೋರ್ಟ್ಸ್ ನಲ್ಲಿ ನೇರ ಪ್ರಸಾರಗೊಳ್ಳುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X