ಸ್ವಯಂಘೋಷಿತ ಸ್ವಾಮಿ ವಿರುದ್ಧ ಮೋಕಾ ದಾಖಲು
ನವದೆಹಲಿ,
ಮಾ. 1 : ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿತವಾಗಿರುವ ಸ್ವಯಂ ಘೋಷಿತ ಸ್ವಾಮೀಜಿ ಶಿವಮಾರುತ್ ದ್ವಿವೇದಿ ಅಲಿಯಾಸ್ ಇಚ್ಚಾಧರಿ ಸಂತ ಸ್ವಾಮಿ ಭೀಮಾನಂದಜೀ ಮಹಾರಾಜ್ ವಿರುದ್ಧ ಮೋಕಾ ಕಾಯ್ದೆ ದಾಖಲಿಸಲು ದೆಹಲಿ ಪೊಲೀಸರು ಚಿಂತನೆ ನಡೆಸಿದ್ದಾರೆ. id="toptextpromo">ದಕ್ಷಿಣ
ದೆಹಲಿಯಲ್ಲಿರುವ ಕಾನಪುರ್ ಪ್ರದೇಶದಲ್ಲಿ ಭವ್ಯವಾದ ಬಂಗಲೆಯನ್ನು ಕಟ್ಟಿಕೊಂಡಿರುವ ಸ್ವಾಮೀಜಿ, ಈ ಬಂಗಲೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ವೇಶ್ಯಾವಾಟಿಕೆಯಿಂದ ಕೋಟ್ಯಂತರ ಆದಾಯ ಗಳಿಸುತ್ತಿದ್ದ ಸ್ವಾಮೀಜಿ ಆಶ್ರಮಕ್ಕೆ ಇತ್ತೀಚೆಗೆ ದೆಹಲಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ದಾಳಿಯ ವೇಳೆ ಸ್ವಾಮೀಜಿ, ಆತನ ಸಹಚರ, ಆರು ಮಂದಿ ಹೆಣ್ಣುಮಕ್ಕಳು, ಇಬ್ಬರು ಗಗನಸಖಿಯರನ್ನು ಬಂಧಿಸಲಾಗಿತ್ತು. ಬಂಧಿತ ವ್ಯಕ್ತಿ ಸ್ವಾಮೀಜಿ ವೇಷಧರಿಸಿ ಅನೇಕರಿಗೆ ಮೋಸ ಮಾಡಿದ್ದಾನೆ. ಕೆಲವರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾನೆ. ಈತನ ವಿರುದ್ಧ ಮೋಕಾ ಕಾಯ್ದೆ ಸೂಕ್ತ ಎಂದು ದೆಹಲಿ ಪೊಲೀಸರು ತೀರ್ಮಾನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲ್ಲದೇ
ಬಂಧಿತ ಸ್ವಾಮೀಜಿಗೆ ಅಂತಾರಾಜ್ಯ ವೇಶ್ಯಾವಾಟಿಕೆ ನಡೆಸುತ್ತಿರುವ ವ್ಯಕ್ತಿಗಳೊಂದಿಗೆ ಸಂಪರ್ಕವಿದೆ. ವೇಶ್ಯಾವಾಟಿಕೆ ಸ್ವಾಮೀಜಿ ಅಪಾರ ಹಣ ಗಳಿಸಿದ್ದಾನೆ. ಇತ್ತೀಚೆಗೆ ಸ್ವಾಮೀಜಿ ತನ್ನ ಸ್ವಂತ ಗ್ರಾಮ ಚಿತ್ರಕೂಟದಲ್ಲಿ 200 ಹಾಸಿಗೆವುಳ್ಳ ಆಸ್ಪತ್ರೆಯನ್ನೂ ಕಟ್ಟಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications