ನಕ್ಸಲರೊಂದಿಗೆ ಷರತ್ತುಬದ್ಧ ಮಾತುಕತೆ ಇಲ್ಲ
ನವದೆಹಲಿ,
ಫೆ. 23 : ಮಾವೋವಾದಿಗಳೊಂದಿಗೆ ಷರತ್ತು ಬದ್ದ ಮಾತುಕತೆಯನ್ನು ಸರಕಾರ ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಆದರೆ, ಮಾವೋವಾದಿಗಳು ಹಿಂಸೆಯನ್ನು ಕೈಬಿಡಬೇಕು ಎಂಬುದು ಸರಕಾರದ ಮನವಿ ಎಂದು ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಸ್ಪಷ್ಟಪಡಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಾವೋವಾದಿಗಳು ಷರತ್ತುಬದ್ದ ಮಾತುಕತೆಗೆ ಕುರಿತು ಎದ್ದಿದ್ದ ಉಹಾಪೋಹಕ್ಕೆ ಸರಕಾರದ ಸ್ಪಷ್ಟನೆ ನೀಡಿದ್ದಾರೆ. ಮಾವೋವಾದಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಈಗಲೂ ಅದೇ ಮನವಿ ಮಾಡಿಕೊಳ್ಳುತ್ತಿದ್ದು, ತಾವು ನಡೆಸುತ್ತಿರುವ ನರಹತ್ಯೆಯನ್ನು ಕೈಬಿಡಬೇಕು. ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅತ್ತ
ಗುಪ್ತ ಸ್ಥಳದಿಂದ ದೂರವಾಣಿ ಮೂಲಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾವೋವಾದಿಗಳ ನಾಯಕ ಕಿಶನಜೀ ಅವರು, ಹಿಂಸೆ ಕೈಬಿಟ್ಟರೆ 72 ಗಂಟೆಯೊಳಗೆ ಮಾವೋವಾದಿಗಳೊಂದಿಗೆ ಸರಕಾರ ಮಾತುಕತೆ ನಡೆಸುತ್ತದೆ ಎಂದು ಹೇಳಿದೆ. ನಮ್ಮ ಕೆಲಸ ಷರತ್ತುಗಳಿಗೆ ಒಪ್ಪುವುದಾದರೆ ನಾವು ಮಾತುಕತೆ ತಯಾರಾಗಿದ್ದೇವೆ ಎಂದು ಹೇಳಿದ್ದಾರೆ. ಮುಖ್ಯವಾಗಿ ಹಿಂದುಳಿದ ಪ್ರದೇಶದ ಅಭಿವೃದ್ಧಿಯೇ ನಮ್ಮ ಏಕೈಕ ಷರತ್ತು ಎಂದು ಕಿಶನಜೀ ಹೇಳಿದ್ದಾರೆ.











Click it and Unblock the Notifications