ವರ್ಷಾಂತ್ಯದಲ್ಲಿ ಭಾರತಕ್ಕೆ ಒಬಾಮಾ ಭೇಟಿ ಸಾಧ್ಯತೆ
ವಾಷಿಂಗ್ಟನ್
ಡಿಸಿ, ಫೆ. 20 : ಭಾರತ ತನ್ನ ಪ್ರಮುಖ ಪಾಲುದಾರ ರಾಷ್ಟ್ರವೆಂದು ಪರಿಗಣಿಸಿರುವ ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ ಎಂದು ಅಮೆರಿಕಾ ಸರಕಾರದ ಪ್ರಮುಖ ಅಧಿಕಾರಿಯೊಬ್ಬರು ಹೇಳಿದ್ದಾರೆ. id="toptextpromo">ಕಳೆದ
ನವೆಂಬರ್ ನಲ್ಲಿ ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರನ್ನು ಅಮೆರಿಕಕ್ಕೆ ಆಹ್ವಾನಿಸಿದಾಗಲೇ ಒಬಾಮಾ ಅವರ ಭಾರತ ಭೇಟಿ ಖಚಿತವಾಗಿತ್ತು ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಸಹಾಯಕ ಕಾರ್ಯದರ್ಶಿಯಾಗಿರುವ ರಾಬರ್ಟ್ ಬ್ಲೇಕ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸಿಂಗ್
ಅವರ ಅಮೆರಿಕ ಭೇಟಿಗೆ ಪ್ರತಿಯಾಗಿ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿರುವುದು ಭಾರತ ಭೇಟಿಯ ಮಹತ್ವವನ್ನು ಸಾರುತ್ತದೆ ಎಂದು ಜಾಗತಿಕ ವಿದ್ಯಮಾನದ ಬಗ್ಗೆ ಶಿಕಾಗೋದಲ್ಲಿ ಬ್ಲೇಕ್ ತಿಳಿಸಿದ್ದಾರೆ. ಆದರೆ, ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ.











Click it and Unblock the Notifications