ಕುಂಚ ಕಲಾವಿದ ಬಿಕೆಎಸ್ ವರ್ಮಾಗೆ ಅಭಿನಂದನೆ
ಬೆಂಗಳೂರು,
ಫೆ. 19 : ಖ್ಯಾತ ಚಿತ್ರಕಲಾವಿದ ಬಿಕೆಎಸ್ ವರ್ಮಾ ಅವರ 60 ವಸಂತಗಳ ಸಂಭ್ರಮಕ್ಕಾಗಿ ಬಿಕೆಎಸ್ ವರ್ಮಾ-60 ಅಭಿನಂದನಾ ಸಮಿತಿಯೂ ಮಾರ್ಚ್ 2 ರಂದು ವರ್ಮಾ ಅವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಿದೆ. id="toptextpromo">ಈಗಾಗಲೇ
ಬಿಕೆಎಸ್ ವರ್ಮಾ ಅವರ ಚಿತ್ರಕಲೆ, ಛಾಯಾಚಿತ್ರ ಪ್ರದರ್ಶನಗಳು ನಡೆಯುತ್ತಿದ್ದು, ಫೆ. 28 ರಂದು ಕಸ್ತೂರಿಬಾ ರಸ್ತೆಯಲ್ಲಿರುವ ವೆಂಕಟಪ್ಪ ಗ್ಯಾಲರಿಯಲ್ಲಿ ಬೆಳಗ್ಗೆ 10.30ಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಕೆಸಿ ರಾಮಮೂರ್ತಿ ಉದ್ಘಾಟಿಸುವರು. ವಿಚಾರ ಸಂಕಿರಣವನ್ನು ಲಲಿತಾ ಕಲಾ ಅಕಾಡಮಿ ಅಧ್ಯಕ್ಷ ಜಿ ಎಸ್ ಖಂಡೇರಾವ್ ಉದ್ಘಾಟಿಸುವರು. ನಂತರ ವರ್ಮಾವಲೋಕನ ಹಾಗೂ ಜನಪ್ರಿಯ ಕಲಾಲೋಕನ ಗೋಷ್ಠಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
2ರಂದು ಸಂಜೆ 6 ಗಂಟೆಗೆ ಬಿಕೆಎಸ್ ವರ್ಮಾ ಅಭಿನಂದನಾ ಸಮಾರಂಭ ನಡೆಯಲಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸುವರು. ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕುಂಚ ವಿರಿಂಚ ಅಭಿನಂದನಾ ಗ್ರಂಥವನ್ನು ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಬಿಡುಗಡೆ ಮಾಡುವರು. ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ವೆಬ್ ಸೈಟ್[ http://www.bksvarma.com/] ಉದ್ಘಾಟಿಸುವರು.











Click it and Unblock the Notifications