ಮೈಸೂರಿನಲ್ಲಿ ಕಿದ್ವಾಯಿ ಶಾಖೆ ಆರಂಭ
ಮೈಸೂರು,
ಫೆ. 18 : ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಶಾಖೆಯನ್ನು ನಗರದ ಕೆ ಆರ್ ಆಸ್ಪತ್ರೆಯಲ್ಲಿ ಆರಂಭಿಸಲಾಯಿತು. ವೈದ್ಯಕೀಯ ಸಚಿವ ರಾಮಚಂದ್ರಗೌಡ ಅವರು ಪ್ರಥಮ ಹಂತದ ಕ್ಯಾನ್ಸರ್ ಆಸ್ಪತ್ರೆಯನ್ನು ಉದ್ಘಾಟನೆಯನ್ನು ನೆರವೇರಿಸಿದರು. id="toptextpromo">ಮೊದಲ
ಹಂತದಲ್ಲಿ ಪ್ರಥಮ ಹಂತದ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಮೈಸೂರಿನ ಸುತ್ತಮುತ್ತಲಿನ ಜನರು ಬೆಂಗಳೂರಿನವರೆಗೂ ಬಂದು ತಪಾಸಣೆ ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಅನೇಕ ಜನರು ಈ ರೋಗಕ್ಕೆ ಮರಣವನ್ನಪ್ಪಿದ್ದಾರೆ. ಜನಸಾಮಾನ್ಯರಿಗೂ ಉತ್ತಮ ಚಿಕಿತ್ಸೆ ದೊರೆಯಬೇಕು ಎನ್ನುವ ದೃಷ್ಟಿಯಿಂದ ಕ್ಯಾನ್ಸರ್ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಮುಂದಿನ ಆರು ತಿಂಗಳೊಳಗೆ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯುವ ಬಗ್ಗೆ ಸಕಲ ವ್ಯವಸ್ಥೆಗಳನ್ನೂ ಮಾಡಲಾಗುವುದು ಎಂದು ರಾಮಚಂದ್ರಗೌಡ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಕಿದ್ವಾಯಿ
ಆಸ್ಪತ್ರೆಯ ನಿರ್ದೇಶಕ ಡಾ. ಎಂ ವಿಜಯಕುಮಾರ್, ಎಂಎಂಸಿಆರ್ಐನ ಡಾ ಡಿ ವೆಂಕಟೇಶ್, ಕೆ ಆರ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಡಾ ಗೀತಾ ಕೆ ಅವಧಾನಿ ಸೇರಿ ಅನೇಕ ವೈದ್ಯರು ಹಾಜರಿದ್ದರು.











Click it and Unblock the Notifications