ಶೀಘ್ರದಲ್ಲಿ ಕ್ವಾಂಟಮ್ ಕಂಪ್ಯೂಟರ್ ಆಗಮನ
ಬೆಂಗಳೂರು,
ಫೆ. 17 : ಆಧುನಿಕ ತಂತ್ರಜ್ಞಾನವನ್ನು ಆಧರಿಸಿ ಕ್ವಾಂಟಮ್ ಕಂಪ್ಯೂಟರ್ ಕೆಲವೇ ವರ್ಷಗಳಲ್ಲಿ ಅವಿಷ್ಕಾರವಾಗಲಿದೆ ಎಂದು ನೋಬೆಲ್ ಪುರಷ್ಕೃತ ಭೌತವಿಜ್ಞಾನಿ ಎರಿಕ್ ಕಾರ್ನೆಲ್ ಹೇಳಿದರು. id="toptextpromo">ಹನಿವೆಲ್
ಸಂಸ್ಥೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಎಂ ಎಸ್ ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದ ಕೆಲ ವಿಜ್ಞಾನ ಸಂಸ್ಥೆಗಳೂ ಒಳಗೊಂಡಂತೆ ಜಗತ್ತಿನಾದ್ಯಂತ ಈ ಕುರಿತು ಸಂಶೋಧನೆ ಹಾಗೂ ಪ್ರಯೋಗಗಳು ನಡೆಯುತ್ತಲಿವೆ ಎಂದರು. id='are-slot-1' class='oiad oi-axt oiadv'> id='top-searched-articles'>ಪರಮಾಣುವಿನ
ತಾಪಮಾನವನ್ನು ಶೂನ್ಯದ ಬಲಿ ತಂದಾಗ ಗೋಚರಿಸುವ ಅದ್ಭುತ ವಿದ್ಯಮಾನಗಳಿಗೆ ಸಂಬಂಧಿಸಿದ ಸಿದ್ಧಾಂತವನ್ನು ಈ ಹಿಂದೆ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ಹಾಗೂ ಸತ್ಯೇಂದ್ರನಾಥ್ ಬೋಸ್ ಮಂಡಿಸಿದ್ದಾರೆ. ನಾನು ನೋಬೆಲ್ ಪ್ರಶಸ್ತಿ ದೊರೆತ ನಂತರವೂ ಬೋಸ್ ಐನ್ ಸ್ಟೀನ್ ಹನೀಕರಣದ ಬಗ್ಗೆ ಸಂಶೋಧನೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ ಎಂದರು.











Click it and Unblock the Notifications