ಗೋಹತ್ಯೆ ನಿಷೇಧ ಕಾನೂನು ಏಕೆ ? ಬಂಗಾರಪ್ಪ
ಶಿವಮೊಗ್ಗ,
ಫೆ. 16 : ಗೋಹತ್ಯೆ ನಿಷೇಧ ಕಾನೂನು ಜನವಿರೋಧಿ ಕ್ರಮ. ಗೋರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಾನೂನು ರೂಪಿಸಿದೆ. ಇದರಡಿಯಲ್ಲಿ ರಕ್ಷಣೆ ಪಡೆಯಬಾರದೇಕೆ ಎಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಪ್ರಶ್ನಿಸಿದ್ದಾರೆ. id="toptextpromo">ನಗರದಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಮತ್ತು ಹೊಸನಗರದ ರಾಮಚಂದ್ರಾಪುರ ಮಠದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯ ಸರಕಾರ ಒಂದು ವರ್ಗದ ಪರವಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಗೋಹತ್ಯೆ ನಿಷೇಧ ಕಾನೂನು ಸಾಕ್ಷಿಯಾಗಿದೆ. ಸಾರ್ವಜನಿಕ ಅಭಿಪ್ರಾಯಪಡೆಯದೆ ಇಂತಹ ಜನವಿರೋಧಿ ಕಾನೂನುಗಳನ್ನು ರೂಪಿಸುವುದು ಯಾವ ನ್ಯಾಯ ? ಯಾರಿಗಾಗಿ ಈ ಕಾನೂನು ರೂಪಿಸಲಾಗಿದೆ ಎಂದು ಬಂಗಾರಪ್ಪ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಸೋರಬ
ತಾಲ್ಲೂಕಿನಲ್ಲಿ ಸರಕಾರದ ಉದ್ದೇಶತ ದಂಡಾವತಿ ಯೋಜನೆಗೆ ವಿರೋಧಿಸಿ ಫೆ 19 ರಂದು ಸೊರಬದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಗೆ ಮಾಜಿ ಪ್ರಧಾನಿ ದೇವೇಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಬಂಗಾರಪ್ಪ ವಿವರಿಸಿದರು. ರಾಮಚಂದ್ರಾಪುರಮಠದ ವಿರುದ್ಧ ಕಿಡಿಕಾರಿದ ಅವರು, ರಾಮಚಂದ್ರಾಪುರ ಮಠ ಅರಣ್ಯ ಒತ್ತುವರಿ ಮಾಡಿಕೊಂಡಿದೆ ಎಂದು ಆರೋಪಿಸಿದರು.











Click it and Unblock the Notifications