ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರುದ್ಯೋಗಿಗಳ ಕಾರ್ಮೋಡಕ್ಕೆ ಬೆಳ್ಳಿ ರೇಖೆ

By Mahesh
|
Google Oneindia Kannada News

Murugesh Nirani
ಬೆಂಗಳೂರು, ಫೆ .9: ಹುಬ್ಬಳ್ಳಿ-ಧಾರವಾಡ ಕೈಗಾರಿಕಾ ವಲಯಕ್ಕೆ ದ್ವಿಚಕ್ರ ವಾಹನ ನಿರ್ಮಾಣ ಕ್ಷೇತ್ರದ ದಿಗ್ಗಜ ಹೀರೋ ಹೊಂಡಾ ಮೋಟಾರ್ಸ್ ಕಾಲಿಟ್ಟ ಬೆನ್ನಲ್ಲೇ, ನಾಲ್ಕಾರು ಕಂಪೆನಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿವೆ ಎಂದು ರಾಜ್ಯ ಕೈಗಾರಿಕಾ ಖಾತೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಹೀರೋ ಹೋಂಡಾ ನಂತರ ಮೋಸರ್ ಬೇರ್ ಲಿಮಿಟೆಡ್, ಕಜರಿ ಸಿರಾಮಿಕ್ಸ್ ಲಿಮಿಟೆಡ್, ಕಪ್ಸಿ ಕೋಟಿಂಗ್ಸ್, ನೆಕ್ಟರ್ ಲೈಫ್ ಸೈನ್ಸ್ ಲಿಮಿಟೆಡ್ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿಸಿವೆ. ಮೋಸರ್ ಬೇರ್ ಕಂಪೆನಿಯು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಲರ್ ವೊಲಾಟಿಕ್ ಯೋಜನೆಗೆ ಸುಮಾರು 850 ಕೋಟಿ ಬಂಡಾವಳ ಹೂಡುತ್ತಿದೆ. ಈ ಯೋಜನೆಗೆ ಹೊಂದಿಕೊಂಡಂತೆ 50 ಮೆ.ವ್ಯಾ ಪವರ್ ಗ್ರಿಡ್ ಸ್ಥಾಪನೆಯಾಗಲಿದೆ.

ಸಿರಾಮಿಕ್ ಹಾಗೂ ವಿಟಿಫೈಡ್ ಟೈಲ್ಸ್ ಗಳನ್ನು ಉತ್ಪಾದಿಸಲು ಬೆಳಗಾವಿ ಜಿಲ್ಲೆಯಲ್ಲಿ 150 ಕೋಟಿ ಮೊತ್ತದ ಘಟಕದ ಸ್ಥಾಪನೆಗೆ ಕಜರಿಯಾ ಸಿರಾಮೆಕ್ಸ್ ಸಂಸ್ಥೆ ಮುಂದಾಗಿದೆ. ಈಜಿಪ್ಟ್ ಮೂಲದ ಕಪ್ಸಿ ಕೋಟಿಂಗ್ಸ್ ಸಂಸ್ಥೆಯು ಪೈಂಟ್ಸ್ ಹಾಗೂ ಅಲಂಕಾರಿಕ ಕೋಟಿಂಗ್ಸ್ ತಯಾರಿಕ ಘಟಕಗಳ ಸ್ಥಾಪನೆಗೆ 145 ಕೋಟಿ ಬಂಡವಾಳ ಹೂಡುತ್ತಿದೆ. ಸುಮಾರು 300 ಜನರಿಗೆ ಉದ್ಯೋಗವಕಾಶ ಸಿಗಲಿದೆ. ಮಾಲೂರು, ಕೋಲಾರ, ತುಮಕೂರು ಹಾಗು ಮೈಸೂರು ಕೈಗಾರಿಕಾ ಪ್ರದೇಶಗಳಲ್ಲಿ ಘಟಕ ಸ್ಥಾಪನೆಗಾಗಿ ಸಮೀಕ್ಷೆ ಕಾರ್ಯದಲ್ಲಿ ಕಪ್ಸಿ ಸಂಸ್ಥೆ ತೊಡಗಿದೆ.

ನೆಕ್ಟರ್ ಲೈಫ್ ಸೈನ್ಸ್ ಲಿ ಸಂಸ್ಥೆ ಸುಮಾರು 1500 ಕೋಟಿ ರು ವೆಚ್ಚ ಹೂಡುತ್ತಿದ್ದು, 800 ಜನರಿಗೆ ಉದ್ಯೋಗ ನೀಡಲಿದೆ. ದಕ್ಷಿಣ ಕೊರಿಯಾದ ಉಕ್ಕು ಉದ್ಯಮ ದಿಗ್ಗಜ ಪೋಸ್ಕೋ ಸುಮಾರು 32ಸಾವಿರ ಕೋಟಿ ಹೂಡಲು ಮುಂದಾಗಿದೆ. ಸುಮಾರು 20 ಸಾವಿರ ಜನರಿಗೆ ಇದರಿಂದ ಕೆಲಸ ದೊರೆಯುವ ಭರವಸೆ ನೀಡಿದೆ ಎಂದು ಸಚಿವ ನಿರಾಣಿ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X