ವಿಶ್ವಕಪ್ ಹಾಕಿ:ಭಾರತ ತಂಡ ನಾಯಕತ್ವ ಕಿರಿಕಿರಿ

Rajpal and Prabhjot singh
ನವದೆಹಲಿ,ಫೆ.8: ಫೆ.28 ರಿಂದ ಆರಂಭವಾಗಲಿರುವ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಸಾರಥ್ಯವನ್ನು ರಾಜ್‌ಪಾಲ್ ಸಿಂಗ್ ಅವರೇ ವಹಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಹಾಕಿ ತಂಡದ ನಾಯಕತ್ವ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದೆ. 18 ಮಂದಿಯ ತಂಡವನ್ನು ಭಾನುವಾರ ಪ್ರಕಟಿಸಲಾಗಿದ್ದು ತಂಡದಲ್ಲಿ ಯಾವುದೇ ಅಚ್ಚರಿಯ ಪ್ರಗತಿಗಳು ಕಂಡುಬಂದಿಲ್ಲ.

ಆದರೆ ನಾಯಕತ್ವಕ್ಕೆ ಕೇಳಿ ಬರುತ್ತಿದ್ದ ಪ್ರಭ್ಜೋತ್ ಸಿಂಗ್ ಮತ್ತು ತಂಡದ ಉಪನಾಯಕತ್ವ ಪಟ್ಟದ ಬಗ್ಗೆ ಚರ್ಚೆಗಳು ನಡೆದಿತ್ತು.ವಿಶೇಷವೆಂದರೆ ಪ್ರಭ್ಜೋತ್ ಸಿಂಗ್ ಅವರೇ ತಂಡದ ನೂತನ ನಾಯಕರಾಗುವರು ಎಂದು ಹಾಕಿ ಇಂಡಿಯಾ ಪ್ರಕಟಿಸಿತ್ತು. ಹಿರಿಯ ಆಟಗಾರರಾದ ಪ್ರಭ್ಜೋತ್ ಸಿಂಗ್, ಅರ್ಜುನ್ ಹಾಲಪ್ಪ ಅವರು ತಂಡದ ಸಾರಥ್ಯ ವಹಿಸಿಕೊಂಡರೆ ಒಳಿತು ಎಂದು ತರಬೇತುದಾರ ಜೋಸ್ ಬ್ರಾಸ ಕೂಡ ಸೂಚಿಸಿದ್ದರು. ಸಂಭಾವನೆ ವಿಚಾರದಲ್ಲಿ ಆಟಗಾರರಿಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದವರಲ್ಲಿ ಪ್ರಭ್ಜೋತ್ ಪ್ರಮುಖರಾಗಿದ್ದರು.

ತಂಡ :
ಆಡ್ರಿಯನ್ ಡಿಸೋಜಾ, ಪಿ.ಆರ್.ಶ್ರೀಜಿಶ್ (ಗೋಲ್‌ಕೀಪರ್‌ಗಳು)
ಸಂದೀಪ್ ಸಿಂಗ್, ಧನಂಜಯ್ ಮಹಾಧಿಕ್, ದಿವಾಕರ್ ರಾಮ್(ಡಿಫೆಂಡರ್ಸ್)
ಗುರ್ಬಾಜ್ ಸಿಂಗ್, ಸರದಾರ್ ಸಿಂಗ್, ಭರತ್, ಅರ್ಜುನ್ ಹಾಲಪ್ಪ, ದಾನಿಶ್ ಮುಜ್ತಾಬಾ, ವಿಕ್ರಂ ಪಿಳ್ಳೆ(ಮಿಡ್ ಫೀಲ್ಡರ್ಸ್)
ರಾಜ್‌ಪಾಲ್ ಸಿಂಗ್, ಶಿವೇಂದ್ರ ಸಿಂಗ್, ತುಷಾರ್ ಖಾಂಡೇಕರ್, ಪ್ರಭ್ಜೋತ್ ಸಿಂಗ್, ಸರ್ವನ್‌ಜಿತ್ ಸಿಂಗ್, ದೀಪಕ್ ಠಾಕುರ್, ಗುರ್ವಿಂದರ್ ಸಿಂಗ್ ಚಾಂದಿ (ಫಾರ್ವರ್ಡ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+