ಎರಡು ಹುಲಿಗಳನ್ನು ಕಚ್ಚಿದ ಗುರೂಜಿ!

Ravishnakar Guruji
ನವದೆಹಲಿ, ಫೆ. 5 : ಮುಂಬೈ ಮರಾಠಿಗಳಿಗೆ ಮಾತ್ರ ಸೀಮಿತ ಎಂಬ ಕೀಳುಮಟ್ಟದ ಮಾತಾಡುವುದನ್ನು ತಕ್ಷಣ ನಿಲ್ಲಿಸಿ; ಭಾರತ ಒಂದು, ಭಾರತೀಯರೆಲ್ಲ ಒಂದು ಎಂಬ ಉದಾತ್ತವಾದ ಮಂತ್ರದಲ್ಲಿ ನಂಬಿಕೆ, ವಿಶ್ವಾಸ ಇಡಿ ಎಂದು ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸಮಿತಿಗೆ ಶ್ರೀ ರವಿಶಂಕರ್ ಮುಲಾಜಿಲ್ಲದೆ ಹೇಳಿದ್ದಾರೆ.

ವಿವಿಧತೆಯಲ್ಲಿ ಏಕತೆಯೇ ಭಾರತದ ಸೊಗಸು ಎಂದು ಹೇಳಿದ ಶ್ರೀರವಿಶಂಕರ್ , ಸಣ್ಣಪುಟ್ಟ ಸಂಗತಿಗಳನ್ನು ಮುಂದಿಟ್ಟುಕೊಂಡು ಭಾರತದ ಘನತೆಗೆ ಚ್ಯುತಿ ತರಬೇಡಿ ಎಂದು ಗುಡುಗಿದರು. ಪದೇಪದೇ ಮುಂಬೈ ಮರಾಠಿ, ಮರಾಠಿ ಮುಂಬೈ ಜಪ ಮಾಡುತ್ತಿರುವ ಹುಲಿ ಮತ್ತು ಮರಿಹುಲಿಯ ಹೇಳಿಕೆಗಳಿಂದ ಬೇಸತ್ತು ಅವರು ಈ ರೀತಿ ಹೇಳಿದರು.

ನಿಮ್ಮ ಪಕ್ಷಗಳಿಗೆ ( ಶಿವಸೇನೆ, ಎಂಎನ್ ಎಸ್) ಸ್ವಲ್ಪ ವಿಶ್ರಾಂತಿ ಬೇಕಾಗಿದೆ. ಜತೆಗೆ ಮಾರ್ಗದರ್ಶನದ ಅಗತ್ಯವೂ ಇದೆ. ಎರಡೂ ಪಕ್ಷದವರು ನಮ್ಮ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಧ್ಯೇಯದಲ್ಲಿ ನಂಬಿಕೆ ಇಟ್ಟು ಬಿಗಿಯಾದ ನರನಾಡಿಗಳನ್ನು ಸ್ವಲ್ಪ ಲೂಸ್ ಮಾಡಿಕೊಳ್ಳಿ ಎಂದು ಉಪದೇಶ ಮಾಡಿದರು.

ಗುರೂಜಿಗಳ ಉಪದೇಶ ಕಿವಿಗೆ ಹಾಕಿಕೊಂಡು ವಿಶ್ರಾಂತಿ,ಧ್ಯಾನ ಮತ್ತು ಶಾಂತಿ ಸಂಪಾದಿಸಲು ಶಿವಸೇನೆ ಮತ್ತು ನವನಿರಮಾಣ ವೇದಿಕೆ ಕಾರ್ಯಕರ್ತರು ಈ ಕೆಳಕಂಡ ವಿಳಾಸಕ್ಕೆ ಬರಬಹುದು.

Ved Vignan Mahavidyapeeth, 21st km, Kanakapura Road, Udayapura, Bengaluru, Karnataka 560 082‎ - PH : 080 2843 2273‎

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+