ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಸ್ಟ್ ಚಾಂಪಿಯನ್ ಶಿಪ್‌ಗಾಗಿ ಸೆಣಸು!

By Mahesh
|
Google Oneindia Kannada News

India takes on SA for battle of test supremacy
ಮುಂಬೈ, ಫೆ. 5: ಭಾರತವು ಟೆಸ್ಟ್ ಸರಣಿ ಜಯಿಸಿದರೆ ಭಾರತದ ಅಗ್ರಶ್ರೇಯಾಂಕ ಇನ್ನಷ್ಟು ಬಲಗೊಳ್ಳುವುದಷ್ಟೇ ಅಲ್ಲದೆ ಭಾರತಕ್ಕೆ ಟೆಸ್ಟ್ ಚಾಂಪಿಯನ್ ಷಿಪ್ ನ ಕಿರೀಟವೂ ದೊರಕಲಿದೆ ಹಾಗೂ 1,75,000 ಡಾಲರ್ ಬಹುಮಾನ ನಿಧಿಯೂ ಮಹೇಂದ್ರ ಧೋನಿ ಬಳಗಕ್ಕೆ ಸಿಗಲಿದೆ.ಯಾರೇ ಗೆದ್ದರೂ ಆ ತಂಡಕ್ಕೆ 1,75,000ಡಾಲರ್ ಬಹುಮಾನ ನಿಧಿ ದೊರಕಲಿದೆ. ಆಸ್ಟ್ರೇಲಿಯಾ ದ್ವಿತೀಯ ಸ್ಥಾನ ಪಡೆಯುವುದು ನಿಶ್ಚಿತವಾಗಿದ್ದು ಅದಕ್ಕೆ 75,000 ಡಾಲರ್ ದೊರಕಲಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ವಾರ್ಷಿಕವಾಗಿ ಈ ಟೆಸ್ಟ್ ಚಾಂಪಿಯನ್ ಷಿಪ್ ಬಹುಮಾನ ನಿಧಿ ದೊರಕಲಿದ್ದು ಪ್ರಸಕ್ತ ಋತು ಎಪ್ರಿಲ್ 1ಕ್ಕೆ ಮುಕ್ತಾಯಗೊಳ್ಳಲಿದೆ. ಎಪ್ರಿಲ್ 1ಕ್ಕೆ ಮುನ್ನ ಇಂಗ್ಲೆಂಡ್ ಬಾಂಗ್ಲಾದೇಶದೊಂದಿಗೆ ಹಾಗೂ ಆಸ್ಟ್ರೇಲಿಯಾ ನ್ಯೂಜಿಲೆಂಡ್‌ನೊಂದಿಗೆ ಟೆಸ್ಟ್ ಸರಣಿ ಆಡಲಿದೆಯಾದರೂ ಅದರ ಫಲಿತಾಂಶವು ಟೆಸ್ಟ್ ಶ್ರೇಯಾಂಕದ ಅಗ್ರಸ್ಥಾನದ ಮೇಲೆ ಯಾವುದೇ ಪರಿಣಾಮ ಬೀರದು.

ಭಾರತವು ಅಗ್ರ ಶ್ರೇಯಾಂಕ ಉಳಿಸಿಕೊಳ್ಳಬೇಕಾದರೆ ಟೆಸ್ಟ್ ಸರಣಿಯನ್ನು ಡ್ರಾಗೊಳಿಸಿಕೊಂಡರೂ ಸಾಕು. ಒಂದು ವೇಳೆ ದ.ಆಫ್ರಿಕಾ 1-0ಯಿಂದ ಸರಣಿ ಗೆದ್ದರೆ ಅದರ ಅಂಕ 123ಕ್ಕೇರಲಿದೆ ಹಾಗೂ ಭಾರತದ ಅಂಕ 122ಕ್ಕೆ ಇಳಿಯಲಿದೆ. ದ.ಆಫ್ರಿಕಾ 2-0ಯಿಂದ ಗೆದ್ದರೆ ಅದರ ಅಂಕ 125ಕ್ಕೆ ಏರಲಿದ್ದು , ಭಾರತದ ಅಂಕ 120ಕ್ಕೆ ಕುಸಿಯಲಿದೆ. ಭಾರತವು 1-0ಯಿಂದ ಗೆದ್ದರೆ ಅದರ ಅಂಕವು 127ಕ್ಕೆ ಏರಲಿದ್ದು , ದ.ಆಫ್ರಿಕಾದ ಅಂಕ 118ಕ್ಕೆ ಕುಸಿಯಲಿದೆ. ಭಾರತವು ಎರಡೂ ಟೆಸ್ಟ್ ಗೆದ್ದರೆ ದ.ಆಫ್ರಿಕಾದ ಅಂಕ 116ಕ್ಕೆ ಇಳಿಯಲಿದೆ.

ವೇಳಾಪಟ್ಟಿ: ದಕ್ಷಿಣ ಅಫ್ರಿಕಾ ಭಾರತ ಕ್ರಿಕೆಟ್ ಪ್ರವಾಸ

ಇದೇ ವೇಳೆಗೆ ಈ ಸರಣಿಯಲ್ಲಿ ಗಂಭೀರ್ ಮತ್ತು ಸ್ಮಿತ್‌ರವರು ಟೆಸ್ಟ್ ಶ್ರೇಯಾಂಕದ ಅಗ್ರಸ್ಥಾನಕ್ಕೂ ಪೈಪೋಟಿ ನಡೆಸಲಿದ್ದಾರೆ. ಪ್ರಸ್ತುತ ಗಂಭೀರ್ ಅಗ್ರಸ್ಥಾನದಲ್ಲಿದ್ದರೆ , ಸ್ಮಿತ್ ದ್ವಿತೀಯ ಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ ಕೂಡ ಅಗ್ರ 5ರೊಳಗೆ ಸ್ಥಾನ ಪಡೆಯಲು ಅವಕಾಶವಿದೆ. ಸದ್ಯಕ್ಕೆ ಸಚಿನ್ 9ನೇ ಸ್ಥಾನದಲ್ಲಿದ್ದಾರೆ. ಅವರಿಗೆ ಮತ್ತು 5ನೇ ಸ್ಥಾನದಲ್ಲಿರುವ ಮೈಕೆಲ್ ಕ್ಲಾರ್ಕ್ ನಡುವೆ ಕೇವಲ 33 ಅಂಕಗಳ ಅಂತರವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X