ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಫೈ ದರ್ಜೆಗೇರಿದ ಮೈಸೂರು ರೈಲು ನಿಲ್ದಾಣ

By Mahesh
|
Google Oneindia Kannada News

Mysore railway station gets Wi-Fi makeover
ಮೈಸೂರು, ಫೆ. 4 : ಭಾರತದ ಐಟಿ ರಾಜಧಾನಿ ಬೆಂಗಳೂರಿನ ರೈಲು ನಿಲ್ದಾಣ ವೈಫೈ(wireless fidelity) ಸೌಲಭ್ಯ ಅಳವಡಿಸಿಕೊಂಡು ವಿಶ್ವ ದರ್ಜೆಗೇರಿದ ಮೂರು ವರ್ಷಗಳ ನಂತರ ಸಾಂಸ್ಕೃತಿಕ ನಗರಿ ಮೈಸೂರಿನ ರೈಲು ನಿಲ್ದಾಣಕ್ಕೂ ವೈಫೈ ಯೋಗ ಸಿಕ್ಕಿದೆ. ಮೂರು ವರ್ಷಗಳ ಕೆಳಗೆ ವೈರ್ ಲೆಸ್ ಜಾಲ ಪಡೆದ ದೇಶದ ಪ್ರಥಮ ರೈಲು ನಿಲ್ದಾಣ ಎಂಬ ಕೀರ್ತಿಗೆ ಬೆಂಗಳೂರು ರೈಲು ನಿಲ್ದಾಣ ಪಾತ್ರವಾಗಿತ್ತು.

ನೈರುತ್ಯ ರೈಲ್ವೇಯ ಹಿರಿಯ ವಿಭಾಗಾಧಿಕಾರಿ(ವಾಣಿಜ್ಯ ವ್ಯವಸ್ಥಾಪಕ) ಅನುಪ್ ದಯಾನಂದ್ ಸಾಧು ಅವರು ಫೆ.3ರಂದು ಮೈಸೂರು ರೈಲು ನಿಲ್ದಾಣದಲ್ಲಿ ವೈಫೈ ಸೌಲಭ್ಯಕ್ಕೆ ಚಾಲನೆ ನೀಡಿದರು. ನಿಸ್ತಂತು ಅಂತರ್ಜಾಲ ಸೇವೆ(wireless internet services)ಯನ್ನು ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯ(ppp)ದ ಸಹಭಾಗಿತ್ವದಲ್ಲಿ ನೀಡಲಾಗುತ್ತಿದೆ ಇಂದು ಹೊಸ ಮಾದರಿ ಯೋಜನೆ ಎಂದು ಸಾಧು ಹೇಳಿದರು.

ವೈಫೈ ಸೌಲಭ್ಯದ ವಿವರಗಳು:

* ನ್ಯೂಜಿಲ್ಯಾಂಡ್ ಮೂಲದ ಟೋಮಿಜೋನ್ ಸಂಸ್ಥೆ ಹಾಗೂ ಮೈಸೂರು ವಿಭಾಗದ ರೈಲ್ವೇ ಘಟಕ ವೈಫೈ ಜಾಲ ನಿಯಂತ್ರಕರು.
* ಪಯಣಿಗರು ಲ್ಯಾಪ್ ಟಾಪ್ ಅಥವಾ ಹೈ ಎಂಡ್ ಮೊಬೈಲ್ ಬಳಸಿ ಅಂತರ್ಜಾಲ ಸಂಪರ್ಕ ಸಾಧಿಸಿಕೊಳ್ಳಬಹುದು.
* ಸದ್ಯಕ್ಕೆ ಆರು ತಿಂಗಳ ಪ್ರಯೋಗಾರ್ಥವಾಗಿ ಸೌಲಭ್ಯ ನೀಡಿಕೆ. ಪ್ರಾಯಾಣಿಕರು ಯಾವುದೇ ವೆಚ್ಚ ಭರಿಸುವ ಅವಶ್ಯಕತೆಯಿರುವುದಿಲ್ಲ.
* ಮೈಸೂರಿಗೆ ಆಗಮಿಸುವ ಅಸಂಖ್ಯಾತ ವಿದೇಶಿ ಪ್ರವಾಸಿಗರು, ವ್ಯಾಪರಸ್ಥರು, ಟೆಕ್ಕಿಗಳಿಗೆ ಅನುಕೂಲಕರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X