ರಾಹುಲ್ ಗೆ ಬುದ್ದಿ ಭ್ರಮಣೆ: ಬಾಳಾ ಠಾಕ್ರೆ
ಮುಂಬೈ,
ಫೆ 3 : ಮುಂಬೈ ವಿಚಾರದಲ್ಲಿ ರಾಜಕೀಯ ನಾಯಕರುಗಳ ಆರೋಪ ಪ್ರತ್ಯಾರೋಪ ವೈಯಕ್ತಿಕ ಮಟ್ಟಕ್ಕಿಳಿದಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದೆ. ಮುಂಬೈ ನಲ್ಲಿ ಯಾರು ಬೇಕಾದರೂ ಬಂದು ಠಿಕಾಣಿ ಹೂಡಲು ಮುಂಬೈ ಧರ್ಮಛತ್ರವಲ್ಲ ಎಂದು ಶಿವಸೇನೆ ಅಧ್ಯಕ್ಷ ಬಾಳಾಠಾಕ್ರೆ ಕಿಡಿಕಾರಿದ್ದಾರೆ. ಅಲ್ಲದೇ, ಮುಂಬೈ ಎಲ್ಲಾ ಭಾರತೀಯ ಸ್ವತ್ತಾಗಿರಬಹುದು ಆದರೆ 'ಇಟಾಲಿಯನ್ ಮಮ್ಮಿ' ಸ್ವತ್ತಲ್ಲ ಎಂದು ಸೋನಿಯಾ ಗಾಂಧಿ ವಿದೇಶಿ ಮೂಲವನ್ನು ಮತ್ತೊಮ್ಮೆ ಕೆದಕಿದ್ದಾರೆ. id="toptextpromo">'ಸಾಮ್ನಾ'
ಪತ್ರಿಕೆಯ ಸಂಪಾದಕೀಯದಲ್ಲಿ ಠಾಕ್ರೆ, ಹಿಂದಿನಿಂದಲೂ ನೆಹರೂ - ಗಾಂಧಿ ಕುಟುಂಬ ಮುಂಬೈ ವಿರೋಧಿಯಾಗಿತ್ತು. ಉತ್ತರ ಭಾರತದ ರಾಜಕಾರಿಣಿಗಳು ಮರಾಠಿ ಭಾಷಿಗರ ಉದ್ಧಾರಕ್ಕೆ ಕೆಲಸ ಮಾಡಿಲ್ಲ. ಮುಂಬೈ ದಾಳಿಯಲ್ಲಿ ಬಲಿದಾನ ಹೊಂದಿದ ಕರ್ಕರೆ, ಕಾಮ್ಟೆ, ಸಲಾಸ್ಕರ್, ಒಂಬ್ಲೆ ಹೆಮ್ಮೆಯ ಮರಾಠಿಗರೇ ಹೊರತು ಬಿಹಾರಿಗಳಲ್ಲ ಎನ್ನುವ ವಿಷಯ ಕಾಂಗ್ರೆಸ್ ಯುವರಾಜನಿಗೆ ತಿಳಿದಿರಲಿ. ಇಂತಹ ರಾಜಕಾರಿಣಿಗಳಿಂದ ಮುಂಬೈ ಮಹಾನಗರವನ್ನು ರಕ್ಷಿಸಲು ಕೇವಲ ಶಿವಸೇನೆಯಿಂದ ಮಾತ್ರ ಸಾಧ್ಯ. ರಾಹುಲ್ ಗಾಂಧೀ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ. ಅವರು ಮರಾಠಿ ಭಾಷಿಗರನ್ನು ಅಪಮಾನಿಸಿದ್ದಾರೆಂದು ಠಾಕ್ರೆ ತಿರುಗೇಟು ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಹಾರದ
ಬುದ್ಧ್ ಗಯಾ ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಶಿವಸೇನೆ ಜನರಲ್ಲಿ ಭಾಷಾವಾರು ವಿಷಬೀಜವ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಮುಂಬೈ ಎಲ್ಲಾ ಭಾರತೀಯರಿಗೆ ಸೇರಿದ್ದು, ಸೇನೆ ತನ್ನ ನಿಲುವನ್ನು ಬದಲಿಸದಿದ್ದಲ್ಲಿ ಜನರೇ ಅವರಿಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.











Click it and Unblock the Notifications