ಎಂಥಾ ಚೆಂದ ಉಂಟು ಈ ಫೋಟೊ

K Shivu s Award winning photo
ಬೆಂಗಳೂರು,ಫೆ.2: ಬೆಂಗಳೂರಿನ ಪ್ರತಿಷ್ಠಿತ "ಯೂತ್ ಫೋಟೊಗ್ರಾಫಿಕ್ ಸೊಸೈಟಿ" 31ನೇ ರಾಷ್ಟ್ರಮಟ್ಟದ ಬಹುದೊಡ್ಡ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರತಿವರ್ಷದಂತೆ ಈ ವರ್ಷವೂ ಕಪ್ಪುಬಿಳುಪು, ವರ್ಣಮಯ, ಪ್ರಾಕೃತಿಕ, ಪ್ರವಾಸ, ವಿಭಾಗಗಳ ಜೊತೆಗೆ ಡಿಜಿಟಲ್ ಪ್ರೊಜೆಕ್ಟ್ ವಿಭಾಗದಲ್ಲಿ ಪ್ರಾಕೃತಿಕ, ಮತ್ತು ಸೃಜನಶೀಲ ಫೋಟೊಗ್ರಾಫಿಯ ವಿಭಾಗವನ್ನು ಸೇರಿಸಿದ್ದು ಈ ಬಾರಿಯ ವಿಶೇಷ.

ಈ ಭಾರಿ ದೇಶದಾದ್ಯಂತ 285 ಛಾಯಾಗ್ರಾಹಕರು ಭಾಗವಹಿಸಿದ್ದು ಒಟ್ಟಾರೆ ಎರಡು ಸಾವಿರದ ಐದುನೂರಕ್ಕೂ ಹೆಚ್ಚು ಛಾಯಾಚಿತ್ರಗಳು ಸ್ಪರ್ಧೆಗೆ ಬಂದಿದ್ದು ದಾಖಲೆ. ಅವುಗಳಲ್ಲಿ ಈಗ ಬಹುಮಾನ ವಿಜೇತ ಚಿತ್ರಗಳ ಸೇರಿದಂತೆ ಒಟ್ಟು 472 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ಖ್ಯಾತ ಹಿರಿಯ ಛಾಯಾಗ್ರಾಹಕರಾದ ಬೆಂಗಳೂರಿನ ಟಿ.ಎನ್.ಪೆರುಮಾಳ್, ಎಚ್.ವಿ.ಪ್ರವೀಣ್ ಕುಮಾರ್, ಜಿ.ಹರಿನಾರಾಯಣ, ಸಿ.ಅರ್.ಸತ್ಯನಾರಾಯಣ, ಹೈದರಬಾದಿನ ರಾಜಬಾಬು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.

ಕಾರ್ಯಕ್ರಮ ವಿವರ:
ಛಾಯಾಚಿತ್ರಗಳ ಪ್ರದರ್ಶನ ಸ್ಥಳ: ಕಸ್ತೂರಿಬಾ ರಸ್ತೆಯ "ವೆಂಕಟಪ್ಪ ಆರ್ಟ್ ಗ್ಯಾಲರಿ"ಯಲ್ಲಿ
ದಿನಾಂಕ: ಫೆಬ್ರವರಿ 4ರಿಂದ 7ರವರೆಗೆ
ಸಮಯ: ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ಏಳುಗಂಟೆ.

ಬಹುಮಾನ ವಿಜೇತರ ಹೆಸರುಗಳು.
* ಕಪ್ಪುಬಿಳುಪು ವಿಭಾಗ

1]ಮೊದಲ ಬಹುಮಾನ: ಶಿವು.ಕೆ ಬೆಂಗಳೂರು. ಚಿತ್ರ: ಕನಸಿನ ಮನೆ [ ಹೆಚ್ಚಿನ ವಿವರಕ್ಕೆ ಬ್ಲಾಗ್ ನೋಡಿ: ಛಾಯಾಕನ್ನಡಿ]
2]ದ್ವಿತೀಯ ಬಹುಮಾನ: ಪಾಲ್ ಅನೂಪ್ ಕಲ್ಕತ್ತ. ಚಿತ್ರ: ಶನಿವಾರ ರಾತ್ರಿ
3]ಮೂರನೇ ಬಹುಮಾನ : ಕೊಂಡ ಜಶುವ.ಆಮಲಪುರಂ ಆಂಧ್ರಪ್ರದೇಶ. ಚಿತ್ರ:ರಸ್ತೆಯ ಮೇಲೆ.

* ವರ್ಣಚಿತ್ರಗಳ ವಿಭಾಗ.
1]ಮೊದಲ ಬಹುಮಾನ : ಸುಬ್ರತಾ ದಾಸ್. ಕೋಚ್ ಬಿಹಾರ್. ಚಿತ್ರ: ಮರದ ಕಡೆಗೆ.
2]ದ್ವಿತೀಯ ಬಹುಮಾನ :ಲೋಕೇಶ್ ಎಸ್. ಬೆಂಗಳೂರು. ಚಿತ್ರ: ಭುವಿಯ ಸ್ವರ್ಗ.
3]ಮೂರನೇ ಬಹುಮಾನ : ಸುಭಾಸ್ ಎಸ್. ಜೀರಂಗೆ. ಮುಂಬೈ. ಚಿತ್ರ: ಸ್ಲೋಕ.
4]ಬೆಸ್ಟ್ ಲ್ಯಾಂಡ್ ಸ್ಕೇಪ್ : ಸುಬ್ರತಾ ದಾಸ್. ಕೋಚ್ ಬಿಹಾರ್. ಚಿತ್ರ: ಮರದ ಕಡೆಗೆ.

*ಪ್ರವಾಸಿ ಚಿತ್ರಗಳು.
1 ]ಮೊದಲ ಬಹುಮಾನ : ಉಮಾಕಾಂತ್ ವಿಜಯ್ ಮದನ್. ಮುಂಬೈ. ಚಿತ್ರ: ಮರಳುಗಾಡಿನ ದೃಶ್ಯ.
2]ದ್ವಿತೀಯ ಬಹುಮಾನ : ದೇಬಸಿಸ್ ತರಪ್‍ದಾರ್. ಕೊಲ್ಕತ್ತ. ಚಿತ್ರ : ಮರಳುಗಾಡಿನ ಸಫಾರಿ.
3]ಮೂರನೇ ಬಹುಮಾನ : ವ್ಯಾಸ್ ರಾಮ್ . ಜೋಧ್ ಪುರ. ರಾಜಸ್ಥಾನ. ಚಿತ್ರ: ಕೈಲಾಸ.

*ಪ್ರಕೃತಿ ವಿಭಾಗ.
1]ಮೊದಲ ಬಹುಮಾನ : ಎಲ್ಲಾಳ್ ಎಸ್. ಮಲ್ಲಿಕಾರ್ಜುನ. ಬೆಂಗಳೂರು. ಚಿತ್ರ: ಕ್ರೂಗರ್ ಹೊಳೆಯಲ್ಲಿ ಚಿರತೆ.
2]ದ್ವಿತೀಯ ಬಹುಮಾನ : ಎಲ್ಲಾಳ್ ಎಸ್. ಮಲ್ಲಿಕಾರ್ಜುನ. ಬೆಂಗಳೂರು. ಚಿತ್ರ: ಬೇಟೆಯನ್ನು ಹಿಡಿದು ಮರವೇರಿದ ಚಿರತೆ.
3]ಮೂರನೇ ಬಹುಮಾನ : ಬಿ.ಕೆ ಸಿನ್ಹ. ಪಾಟ್ನ. ಚಿತ್ರ: ಜೀಬ್ರ ಬೇಟೆಯಾಡಿದ ಸಿಂಹ.
4]ಅತ್ಯುತ್ತಮ ಪಕ್ಷಿ : ಜಿ.ಎಸ್.ರವಿಶಂಕರ್. ಮೈಸೂರು. ಚಿತ್ರ: ಹಾರುತ್ತಿರುವ ಪೈಡ್ ಕಿಂಗ್‍ಫಿಶರ್.
5]ಅತ್ಯುತ್ತಮ ಪ್ರಾಣಿ : ಎಲ್ಲಾಳ್ ಎಸ್. ಮಲ್ಲಿಕಾರ್ಜುನ. ಬೆಂಗಳೂರು. ಚಿತ್ರ: ಬೇಟೆಯನ್ನು ಹಿಡಿದು ಮರವೇರಿದ ಚಿರತೆ.
6]ಉತ್ತಮ ಪ್ರಾಕೃತಿಕ ದೃಶ್ಯ :ಎಲ್ಲಾಳ್ ಎಸ್. ಮಲ್ಲಿಕಾರ್ಜುನ. ಬೆಂಗಳೂರು. ಚಿತ್ರ: ಕ್ರೂಗರ್ ಹೊಳೆಯಲ್ಲಿ ಚಿರತೆ.

* ಡಿಜಿಟಲ್ ಸೃಜನಶೀಲ ಚಿತ್ರಗಳು.
1]ಮೊದಲ ಬಹುಮಾನ : ಅನೂಪ್ ಪಾಲ್.ಕೊಲ್ಕತ್ತ. ಚಿತ್ರ: ಬಾಡಿ ಲಾಂಗ್ವೇಜ್
2]ದ್ವಿತೀಯ ಬಹುಮಾನ : ಅನ್ಷುಮನ್ ರಾಯ್: ಕೊಲ್ಕತ್ತ. ಚಿತ್ರ: ಪಾಸ್ಚರಿಂಗ್
3]ಮೂರನೇ ಬಹುಮಾನ : ಎನ್ ರಾಮ್ ಯಾದವ್. ಮುಂಬೈ. ಚಿತ್ರ : ಕ್ಯಾಂಪಿಂಗ್.
4]ಬೆಸ್ಟ್ ಡಿಜಿಟಲ್ : ಎಸ್.ಪಿ.ಮುಖರ್ಜಿ. ಕೊಲ್ಕತ್ತ. ಚಿತ್ರ: ಕನಸಿನ ಪರಂಪರೆ.

* ಡಿಜಿಟಲ್ ನೇಚರ್ ವಿಭಾಗ.
1]ಮೊದಲ ಬಹುಮಾನ : ಲೋಕೇಶ್ ಎಸ್. ಬೆಂಗಳೂರು. ಚಿತ್ರ: ಕಾಪರ್‌ಸ್ಮಿತ್ ಹಕ್ಕಿ ಮರಿಯ ಜೊತೆ.
2]ದ್ವಿತೀಯ ಬಹುಮಾನ : ಕೆ.ಪಿ.ಮಾರ್ಟಿನ್. ಬೆಂಗಳೂರು. ಚಿತ್ರ: ಆಶಿರೆನ್ ವಾರ್ಬ್ಲರ್ ಹಕ್ಕಿ ಆಹಾರದ ಜೊತೆ.
3]ಮೂರನೇ ಬಹುಮಾನ : ವಿ.ಡಿ.ಭಟ್. ಸುಗಾವಿ. ಚಿತ್ರ: ಓರಿಯಲ್ ಪಕ್ಷಿ ಆಹಾರದ ಜೊತೆ.
4]ಅತ್ಯುತ್ತಮ ಹಕ್ಕಿ. : ವಿಧ್ಯಾದರ್ ಶಿಲ್ಕೆ. ಬೆಳಗಾಂ. ಚಿತ್ರ: ಮೂಳೆಯಿಲ್ಲದ ಹದ್ದು.
5]ಅತ್ಯುತ್ತಮ ಕೀಟ: : ಶಿವು.ಕೆ ಬೆಂಗಳೂರು. ಚಿತ್ರ: ಸಿಗ್ನೇಚರ್ ಜೇಡ.
6]ಅತ್ಯುತ್ತಮ ಚಾಲನೆ ಚಿತ್ರ: ಎಚ್.ಬಿ.ರಾಜೇಂದ್ರ. ಬೆಂಗಳೂರು. ಚಿತ್ರ: ಮೊಸಳೆಯ ಬಾಯಲ್ಲಿ ಬೇಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+