ಗೋವು ಬಂಗಾರದ ಗಣಿ:ರಾಘವೇಶ್ವರ ಶ್ರೀಗಳು

Raghaveshwara Bharathi Swamiji
ಮಾಲೂರು, ಜ. 22 : ಗೋವು ಬಂಗಾರದ ಗಣಿ. ಅದನ್ನು ರಕ್ಷಿಸುವ ನಿಟ್ಟಿನಲ್ಲಿ ರೈತರಿಗೆ ಉದ್ಯಮಿಗಳು ಸಹಕಾರ ನೀಡಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಗಂಗಾಪುರದ ರಾಘವೇಂದ್ರ ಗೋ ಆಶ್ರಮದಲ್ಲಿ ಮಾ ಗೋ ಪ್ರಾಡಕ್ಟ್ ಪ್ರೈ ಲಿಮಿಟೆಡ್‌ನ ಗವ್ಯೋತ್ಪನ್ನಗಳ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದೇಶದ ಪ್ರಮುಖ ಐವರು ಉದ್ಯಮಿಗಳು ಸೇರಿ 2ಕೋಟಿ ವೆಚ್ಚದ ಗವ್ಯೋತ್ಪನ್ನ ಉದ್ಯಮವನ್ನು ಆರಂಭಿಸಿದ್ದಾರೆ ಎಂದರು. ಇವರಲ್ಲಿ ಲಾಭಾಪೇಕ್ಷೆಯಿಲ್ಲ. ಸೇವಾ ಮನೋಭಾವವಿದೆ ಎಂದರು.

ಈ ಉದ್ಯಮ ಸರಕಾರದಿಂದ ಮೈಸೂರು ಹಾಗೂ ಶಿವಮೊಗ್ಗದಲ್ಲಿ ಸ್ಥಾಪನೆ ಆಗಬೇಕಿತ್ತು, ಆದರೆ ಆಗಲಿಲ್ಲ. ಗೋವನ್ನು ಮಾರಾಟ ಮಾಡಿದರೆ ಒಮ್ಮೆ ಮಾತ್ರ ಹಣ ಬರುತ್ತದೆ. ಆದರೆ ಅದರ ಪಾಲನೆ ಪೋಷಣೆಯಿಂದ ಜೀವಿತಾ ವಧಿಯಲ್ಲಿ 12ಲಕ್ಷ ರುಪಾಯಿ ಸಂಪಾದನೆಯಾಗುತ್ತದೆ. ಇದನ್ನು ರೈತರಿಗೆ ತಿಳಿಸುವುದೇ ನಮ್ಮ ಉದ್ದೇಶ ಎಂದು ನುಡಿದರು.

ಗೋವಿನ ರಕ್ಷಣೆಯಿಂದ ರೈತರ ಜತೆಗೆ ದೇಶವೂ ಅಭಿವೃದ್ಧಿಯಾಗುತ್ತದೆ. ನಮ್ಮ ದೇಸಿಯ ಮಲ್ಲಿಕಾ, ಪುಂಗನೂರು, ಸ್ವಾತಿಯಂಥ ತಳಿಗಳ ಉಳಿವಿಗೆ ಈ ಉದ್ಯಮ ಸಹಕಾರಿಯಾಗಲಿದೆ ಎಂದ ಸ್ವಾಮೀಜಿ, ಹಣವುಳ್ಳವರು ಗೋವಿನ ರಕ್ಷಣೆಗೆ ಮುಂದಾಗಬೇಕು. ಗೋ ಹತ್ಯೆ ಬೇಡ, ಗೋವಿನ ಉತ್ಪನ್ನಗಳಿಂದ ಹಣ ಸಂಪಾದಿಸಲು ರೈತರು ಮುಂದಾಗಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+