ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ ಇನ್ನಿಲ್ಲ
ಬೆಂಗಳೂರು,ಜ.
22 : ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವೃತ್ತಿ ರಂಗಭೂಮಿಯ ಹಿರಿಯ ಕಲಾವಿದೆ ಕೆಬಿಆರ್ ನಾಟಕ ಕಂಪನಿಯ ಒಡತಿ ಚಿಂದೋಡಿ ಲೀಲಾ(72) ಗುರುವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. id="toptextpromo"> 20 ದಿನಗಳ ಹಿಂದೆ ಲೀಲಾ ಅವರಿಗೆ ಹೃದಯರೋಗ ಕಾಣಿಸಿಕೊಂಡಿದ್ದರಿಂದ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ವೊಕ್ಹಾರ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ವಾರಗಳ ಹಿಂದೆಯೇ ಅವರು ಅಂಜಿಯೋಗ್ರಾಮ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ರಕ್ತ ಸಂಚಲನದಲ್ಲಿ ತೊಂದರೆಯಿದೆ ಎಂದು ವೈದ್ಯರು ಸೋಮವಾರ ಖಚಿತಪಡಿಸಿದ್ದರು. ಲೀಲಾ ಅವರನ್ನು ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದರು. ಆದರೆ, ಶಸ್ತ್ರ ಚಿಕಿತ್ಸೆ ಬಳಿಕ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಮೂರು ದಿನಗಳಾದರೂ ಪ್ರಜ್ಞೆ ಬಂದಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> ನಗರದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು, ಬಳಿಕ ದಾವಣಗೆರೆಗೆ ಒಯ್ಯಲಾಗುವುದು. ಶನಿವಾರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.











Click it and Unblock the Notifications