ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಜನಪ್ರಿಯತೆ ಹಣಗಳಿಸುವ ಯಂತ್ರ

By Shami
|
Google Oneindia Kannada News

Narendra Modi
ಅಹಮದಾಬಾದ್, ಜ. 21: ಜನಾಕರ್ಷಣೆ ಮತ್ತು ಜನಪ್ರಿಯತೆಯ ಉತ್ತುಂಗದಲ್ಲಿರುವವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ. ಬಾಲಿವುಡ್ ಕಲಾವಿದರೇ ನಾಚಿಸುವಂತೆ ಮೋದಿ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದರೆ ಸಾರ್ವಜನಿಕರು ಕಿಕ್ಕಿರಿದು ತುಂಬಿರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು, ಮೋದಿ ಅವರು ಯಾವುದೇ ಖಾಸಗಿ ಸಮಾರಂಭಗಳಲ್ಲಿ ಭಾಗವಹಿಸಿದರೂ, ಕಾರ್ಯಕ್ರಮದ ಆಯೋಜಕರಿಂದ ದೇಣಿಗೆ ಪಡೆಯುತ್ತಾರೆ.

ಹೀಗೆ, ಮೋದಿ ಅವರ ಕಚೇರಿ ಕಳೆದ ಐದು ವರ್ಷಗಳಲ್ಲಿ ದೇಣಿಗೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ ಒಟ್ಟು ಮೊತ್ತ ಸುಮಾರು 23 ಕೋಟಿ ರೂಪಾಯಿ.

ದೇಣಿಗೆ ಮೂಲಕ ಬರುವ ಈ ಹಣವನ್ನು ಬಾಲ್ಯ ಶಿಕ್ಷಣಕ್ಕಾಗಿ 'ಕನ್ಯಾ ಕೆಲವಾಣಿ ನಿಧಿ' ಸಂಸ್ಥೆಗೆ ಮೋದಿ ನೀಡುತ್ತಿದ್ದಾರೆ. ಸಮಾರಂಭಗಳಲ್ಲಿ ಭಾಗವಹಿಸಿದ ನೆನಪಿಗಾಗಿ ನೀಡುವ ನೆನಪಿನ ಕಾಣಿಕೆ ಹರಾಜಿನಿಂದ ಬರುವ ಹಣವನ್ನು ಕೂಡ ಮೋದಿ ಈ ಸಂಸ್ಥೆಗೆ ನೀಡುತ್ತಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದರಿಂದ ಬರೀ ದೇಣಿಗೆ ಮೂಲಕ ಅಲ್ಲದೇ ಇತರ ಮೂಲಗಳಿಂದ ಸುಮಾರು 104 ಕೋಟಿ ರೂಪಾಯಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹರಿದು ಬಂದಿದೆ.

ಇತ್ತೀಚಿಗೆ ಉದ್ಯಮಿಯೊಬ್ಬರ ಖಾಸಗಿ ಸಮಾರಂಭ ಉದ್ಘಾಟನೆಗೆ ಹೋಗಿದ್ದ ಮುಖ್ಯಮಂತ್ರಿ ಮೋದಿಗೆ ಇವರ ಮುಖಾಂತರ 11 ಲಕ್ಷ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ದಕ್ಕಿದೆ.ಜನವರಿ 2010ರಿಂದ ಮೋದಿ ಇಂತಹ ಸುಮಾರು 20 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೇಣಿಗೆ ನೀಡುವುದು ಕಡ್ಡಾಯವೇನಲ್ಲ, ಆದರೆ, ಸಂಘಟಕರು ತಮ್ಮ ಶಕ್ತ್ಯಾನುಸಾರ ನೀಡುವ ಈ ದೇಣಿಗೆ ಹಣದಿಂದ ಲಕ್ಷಾಂತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬಹುದಾಗಿದೆ ಎಂದು ಮೋದಿ ಅವರ ಸಿಎಂ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X