ಜಿಗಿ ಜಿಗಿಯುತ ನಲಿ ಗಗನದ ಬಯಲಲಿ

ತುಳು ನಾಡಿನ ಭೂತಾರಾಧನೆಯನ್ನು ಹೋಲುವ ಬೃಹತ್ ಗಾಳಿಪಟ ಬಾನಂಗಳದಲ್ಲಿ ಮೋಡಿಮಾಡಿದ್ದಂತು ನಿಜ. ಪಣಂಬೂರು ಬೀಚ್ ಪ್ರವಾಸೊದ್ಯಮ ಅಭಿವೃದ್ದಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಆಹಾರೋತ್ಸವ ಕೂಡಾ ಗಾಳಿಪಟ ಉತ್ಸವಕ್ಕೆ ಪೂರಕವಾಗಿತ್ತು. ಮೀನಿನ ಸುಮಾರು ಐವತ್ತಕ್ಕೂ ಹೆಚ್ಚು ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶವಿತ್ತು. ಸಿಗಡಿ, ಬೊಂಡಾಸ್, ಮಾಂಜಿ ಮುಂತಾದ ಮೀನುಗಳಲ್ಲದೆ ಕರಾವಳಿಯ ತಿನಿಸುಗಳಾದ ಮೂಡೆ, ಪತ್ರೊಡೆ ಕೂಡಾ ಲಭ್ಯವಿತ್ತು.
ಸಾಮಾನ್ಯವಾಗಿ ಪಣಂಬೂರು ಸಮುದ್ರಕಿನಾರೆ ಶನಿವಾರ ಮತ್ತು ಭಾನುವಾರ ಜನಜಾತ್ರೆಯಿಂದ ತುಂಬಿ ತುಳುಕುತ್ತಿರುತ್ತದೆ. ಗಾಳಿಪಟ ಉತ್ಸವದ ಪ್ರಯುಕ್ತ ಸಮುದ್ರಕಿನಾರೆಯಲ್ಲಿ ಸೇರಿದ್ದ ಜನಸಂಖ್ಯೆ ಸುಮಾರು ಒಂದು ಲಕ್ಷಕ್ಕೂ ಅಧಿಕವಾಗಿತ್ತು. ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗುವ ಬೀಚ್ ಉತ್ಸಕ್ಕೆ ಇಷ್ಟು ಪ್ರಮಾಣದಲ್ಲಿ ಬೀಚ್‌ನಲ್ಲಿ ಜನ ಸೇರುತ್ತಿದ್ದರು. ಆದರೆ ಈಬಾರಿ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಜಮಾಯಿಸಿತ್ತು ಜನಜಂಗುಳಿ. ಎರಡು ಕಿ.ಮೀ ಉದ್ದಕ್ಕೂ ವಾಹನಗಳ ಸಾಲು.
ನಿಜಕ್ಕೂ ಗಾಳಿಪಟಗಳನ್ನು ಹಾರಿಸುವ ಪರಿಪಾಟ ಹಳ್ಳಿಗಳಿಂದಲೂ ಮಾಯವಾಗುತ್ತಿದೆ. ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ನಾವು ನಿಧಾನವಾಗಿ ನಮ್ಮ ಮೂಲತನವನ್ನೇ ಕಳೆದುಕೊಳ್ಳುತ್ತಿದ್ದೇವೆ. ಆದರೆ ಹಳ್ಳಿಗಾಡಿನ ಮಕ್ಕಳ ಆಟವೆಂದೇ ಕರೆಯಲಾಗುತ್ತಿದ್ದ ಗಾಳಿಪಟ ತಯಾರಿ ಹಾಗು ಅದನ್ನು ಆಗಸಕ್ಕೆ ಹಾರಿಬಿಟ್ಟು ಅದು ಬಾನಂಗಳದಲ್ಲಿ ಹಾರಾಡುವುದನ್ನು ನೋಡಿ ಮಜಾ ತೆಗೆದುಕೊಳ್ಳುತಿದ್ದ ದಿನಗಳು ಮರೆಯಾಗುತ್ತಿವೆ. ಈಗ ಗಾಳಿಪಟಕ್ಕೂ ಅಂತಾರಾಷ್ಟ್ರೀಯ ಮನ್ನಣೆ, ಜಾಗತಿಕಮಟ್ಟದಲ್ಲಿ ಗಾಳಿಪಟಗಳನ್ನು ಹಾರಿಸುವ ಕಲೆಗಾರಿಕೆ ಜನಪ್ರಿಯವಾಗುತ್ತಿದೆ. ಇದಕ್ಕೆ ಸಾಕ್ಷಿಯಾಯಿತು ಪಣಂಬೂರು ಸಮುದ್ರ ಕಿನಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications