ಮಿಷನರಿಗಳ ಸೇವೆ ಅನನ್ಯ, ಚಂದ್ರೇಗೌಡ
ಬೆಂಗಳೂರು,
ಜ. 18 : ಸ್ವಾತಂತ್ರ್ಯಪೂರ್ವ ಹಾಗೂ ನಂತರದಲ್ಲಿ ಮಿಷನರಿಗಳು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡುತ್ತಿವೆ ಎಂದು ಸಂಸದ ಡಿ ಬಿ ಚಂದ್ರೇಗೌಡ ಪ್ರಶಂಸಿಸಿದರು. id="toptextpromo">ಬೆಂಗಳೂರು
ಬ್ಯಾಪ್ಟಿಸ್ಟ್ ಆಸ್ಪತ್ಪೆಯ 37 ನೇ ವಾರ್ಷಿಕೋತ್ಸವ ಹಾಗೂ ಆಧುನಿಕ ಸೌಲಭ್ಯ ಉದ್ಘಾಟಿಸಿ ಮಾತನಾಡಿದ ಅವರು, ಮಿಷನರಿಗಳ ಸೇವೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಬೇಕು ಎಂದರು. ವೈದ್ಯರು ಮಾನವೀಯ ನೆಲೆಯಲ್ಲಿ ಚಿಕಿತ್ಸೆ ನೀಡಬೇಕು. ಬಡವರಿಗೆ ಕಡಿಮೆ ದರ ಇಲ್ಲವೇ ಉಚಿತವಾಗಿ ಆರೋಗ್ಯ ಸೇವೆ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು. ಬಡವತ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಬಾರದು ಎಂದರು. id='are-slot-1' class='oiad oi-axt oiadv'> id='top-searched-articles'>ನರ್ಸ್
ಗಳು ಮತ್ತು ರೋಗಿಗಳು ಮಧ್ಯೆ ಸಾಮಾಜಿಕ ಸಂಬಂಧ ಇರಬೇಕು. ಕಡಿಮೆ ವೆಚ್ಚದಲ್ಲಿ ಸೇವೆ ದೊರೆಯುವಂತಾಗಬೇಕು ಎಂದು ಅಲ್ಪಸಂಖ್ಯಾತರ ಖಾತೆ ಸಚಿವ ಮಮ್ತಾಜ್ ಅಲಿ ಖಾನ್ ಅಭಿಪ್ರಾಯಪಟ್ಟರು. ಬ್ಯಾಪ್ಟಿಸ್ಟ್ ಆಸ್ಪತ್ರೆಯ ನಿರ್ದೇಶಕ ಮಂಡಳಿ ಅಧ್ಯಕ್ಷ ಡಾ ಸುರಂಜನ್ ಭಟ್ಟಾಚಾರ್ಯ, ಆಸ್ಪತ್ರೆ ನಿರ್ದೇಶಕ ಡಾ ಅಲೆಗ್ಸಾಂಡರ್ ಥಾಮಸ್, ಉಪನಿರ್ದೇಶಕ ಕರ್ನಲ್ ದೀಪಕ್ ಹಾಗೂ ಚಾಂಡಿ ಅಬ್ರಾಹಂ ಉಪಸ್ಥಿತರಿದ್ದರು.











Click it and Unblock the Notifications