ಐಸಿಐಸಿಐ ಬ್ಯಾಂಕಿನೊಳಗೆ ಮೋಸದ ಜಾಲ
ನವದೆಹಲಿ,
ಜ. 18 : ಬೇಲಿನೇ ಎದ್ದು ಹೊಯ್ದು ಹೊಲ ಮೇಯ್ದಿರುವ ಗಾದಿಗೆ ಐಸಿಐಸಿಐ ಬ್ಯಾಂಕ್ ಸಾಕ್ಷಿಯಾಗಿದೆ. ಗ್ರಾಹಕರ ಗುಪ್ತ ಮಾಹಿತಿಯನ್ನೇ ಫೋರ್ಜರಿ ಮಾಡಿ 20 ಲಕ್ಷ ರುಪಾಯಿಗಳನ್ನು ಲಪಟಾಯಿಸಿದ್ದ ಬ್ಯಾಂಕಿನ ಇಬ್ಬರು ನೌಕರರು ಸೇರಿ ಒಟ್ಟು ಐದು ಮಂದಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ನಗರದಲ್ಲಿ ಭಾನುವಾರ ನಡೆದಿದೆ. id="toptextpromo">ದೆಹಲಿ
ಶಾಖೆಯ ಸೇಲ್ಸ್ ಮ್ಯಾನೇಜರ್ ದೀಪಕ್ ಮಲಿಕ್ (33), ಬಿಸಿನೆಸ್ ಬ್ಯಾಂಕಿಂಗ್ ನ ಕೆಲಸಗಾರ ಅಶೀಶ್ ತಿವಾರಿ(24), ಸುನೀಲ್ ಗ್ರೋವರ್(21), ರಾಮ್ ಪ್ರೀತ್ ಸಿಂಗ್(26) ಮತ್ತು ಅಮಿತ್ ಚೌಹಾನ್(29) ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿಗಳು. ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವ ದೀಪಕ್ ಮಲಿಕ್ ಮತ್ತು ಆಶೀಶ್ ತಿವಾರಿ ಗ್ರಾಹಕರಿಗೆ ಸಂಬಂಧಿಸಿದ ಅಷ್ಟೂ ಗುಪ್ತ ಮಾಹಿತಿಗಳನ್ನು ಇತರೆ ಮೂವರಿಗೆ ರವಾನಿಸಿದ್ದಲ್ಲದೇ, ಗ್ರಾಹಕರ ಚೆಕ್ ಬುಕ್ ಗಳನ್ನು ಪೋರ್ಜರಿ ಮಾಡಿ ಬ್ಯಾಂಕಿಗೆ ಮೋಸವೆಸಗಿ ಸುಮಾರು 20 ಲಕ್ಷ ರುಪಾಯಿಗಳನ್ನು ಲಪಟಾಯಿಸಿದ್ದರು ಎಂದು ಉತ್ತರ ದೆಹಲಿಯ ಪೊಲೀಸ್ ಆಯುಕ್ತ ಎಚ್ ಜಿ ಎಸ್ ಧಲಿವಾಲ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಮಿತ್
ಚೌಹಾನ್ ಎಂಬ ಆರೋಪಿಯೂ ಇಂತಹ ಪೋರ್ಜರಿ ಕೆಲಸದಲ್ಲಿ ನಿಪುಣನಾಗಿದ್ದು, ಆತನಿಂದ ಸಹಾಯದಿಂದ ಬ್ಯಾಂಕ್ ನ ಶಾಖಾ ಮುಖ್ಯಸ್ಥ ದೀಪಕ್ ಮಲಿಕ್ ಈ ಕೆಲಸ ಮಾಡಿಸಿದ್ದಾನೆ. ಈ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರಿಸಲಾಗಿದೆ ಎಂದು ಅವರು ಹೇಳಿದರು.











Click it and Unblock the Notifications