ಬಿಬಿಎಂಪಿ ಹಣಾಹಣಿ : ನೀತಿ ಸಂಹಿತೆ ಜಾರಿ
ಬೆಂಗಳೂರು,
ಜ. 15 : ರಾಜ್ಯ ಚುನಾವಣಾ ಆಯೋಗ ಈ ಹಿಂದೆ ಪ್ರಕಟಿಸಿದಂತೆ ಫೆಬ್ರವರಿ 21 ರಂದು ಬಿಬಿಎಂಪಿ ಚುನಾವಣೆಗಳು ನಡೆಲಿಯಲಿದ್ದು, ಇಂದಿನಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳಲಿದೆ. id="toptextpromo">ಬಿಬಿಎಂಪಿ
ಚುನಾವಣೆಗೆ ಸಂಬಂಧಪಟ್ಟಂತೆ ಈ ಹಿಂದೆಯೇ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಜ 15 ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಉಳಿದಂತೆ ಚುನಾವಣೆ ಸಿದ್ಥತೆ ಕಾರ್ಯ ಭರದಿಂದ ಸಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಇತರೆ ಕಾರ್ಯಗಳು ನಡೆದಿವೆ. ಪೂರ್ವ ನಿಗದಿಯಂತೆ ಚುನಾವಣಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ಆಯೋಗ
ಪ್ರಕಟಿಸಿರುವ ವೇಳಾಪಟ್ಟಿಯಂತೆ ಫೆ.1 ರಂದು ಬಿಬಿಎಂಪಿ ಆಯುಕ್ತರು ಚುನಾವಣೆಗೆ ಸಂಬಂಧಪಟ್ಟಂತೆ ಅಧಿಸೂಚನೆ ಹೊರಡಿಸಲಿದ್ದಾರೆ. ನಾಮಪತ್ರ ಸಲ್ಲಿಸಲು ಫೆ 8 ಕೊನೆಯ ದಿನ. ಫೆ 9 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಫೆ 11 ಕಡೆಯ ದಿನವಾಗಿದೆ. ಫೆ 21 ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ.











Click it and Unblock the Notifications