ಹಠ ಹಿಡಿದರೆ ಕಠಿಣ ಕ್ರಮ, ಹಾಕಿ ಇಂಡಿಯಾ

ವಿಡಿಯೋ:ವೇತನ ವಿಳಂಬ, ಹಾಕಿ ಆಟಗಾರರ ಪ್ರತಿಭಟನೆ
ಮುಂದಿನ ತಿಂಗಳು ನವದೆಹಲಿಯಲ್ಲಿ ಹಾಕಿ ವಿಶ್ವಕಪ್ ನಡೆಯಬೇಕಿದೆ. ಅದರ ಪೂರ್ವ ತಯಾರಿಗಾಗಿ ಪುಣೆಯಲ್ಲಿ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸಲಾಗಿದೆ. ಸಂಬಳ ನೀಡಿಲ್ಲ ಎನ್ನುವು ಕಾರಣಕ್ಕೆ ಅಭ್ಯಾಸ ಪಂದ್ಯವನ್ನು ಬಹಿಷ್ಕರಿಸುವುದು ಏಷ್ಟು ಸರಿ ? ಸಮಸ್ಯೆಗಳಿದ್ದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಪಂದ್ಯ ಬಹಿಷ್ಕರಿಸಿದರೆ ಹೇಗೆ ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಎ ಕೆ ಮಟ್ಟೂ ಎಚ್ಚರಿಕೆ ನೀಡಿದ್ದಾರೆ.
ಆಟಗಾರರಿಗೆ ಸಂಬಳಕ್ಕೆ ಸಂಬಂಧಿಸಿದಂತೆ ಹಾಕಿ ಇಂಡಿಯಾ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಆದರೂ ಆಟಗಾರರು ಹಠಹಿಡಿದಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಆಟಗಾರರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮಟ್ಟೂ ಹೇಳಿದ್ದಾರೆ.












Click it and Unblock the Notifications