ಪರಿಷತ್ ಗೆ ಸೋಮಣ್ಣ, ತಾರಾ, ಕೃಷ್ಣಭಟ್ ?
ಬೆಂಗಳೂರು,
ಜ. 10 : ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ಬಿಜೆಪಿ ಅರ್ಹ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದೆ. ಗೋವಿಂದರಾಜನಗರ ಕ್ಷೇತ್ರದಲ್ಲಿ ಸೋತಿರುವ ವಿ ಸೋಮಣ್ಣ, ಚಿತ್ರನಟಿ ತಾರಾ ಹಾಗೂ ಆರ್ಎಸ್ಎಸ್ ಮುಖಂಡ ಕೃಷ್ಣಭಟ್ ನೇಮಕವಾಗುವ ಸಾಧ್ಯತೆಗಳಿವೆ. id="toptextpromo">ಹಾಲಿ
ನಾಮಕರಣ ಸದಸ್ಯರಾಗಿರುವ ಡಾ ಚಂದ್ರಶೇಖರ ಕಂಬಾರ, ಮಲ್ಲಾಜಮ್ಮ ಹಾಗೂ ಪ್ರಕಾಶ್ ರಾಥೋಡ್ ಇದೇ ತಿಂಗಳು 20 ರಂದು ನಿವೃತ್ತರಾಗುವ ಹಿನ್ನೆಲೆಯಲ್ಲಿ ಆ ಸ್ಥಾನಗಳಿಗೆ ವಿವಿಧ ಕ್ಷೇತ್ರಗಳ ಮೂವರನ್ನು ನಾಮಕರಣ ಮಾಡಲು ಪಕ್ಷದಲ್ಲಿ ಸಮಾಲೋಚನೆ ನಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವರ ಬೆಂಬಲ ಸೋಮಣ್ಣ ಅವರಿಗಿರುವುದು ಅವರ ಆಯ್ಕೆ ಸಾಧ್ಯತೆ. id='are-slot-1' class='oiad oi-axt oiadv'> id='top-searched-articles'>ಒಂದು
ವೇಳೆ ಸೋಮಣ್ಣ ಸೇರ್ಪಡೆ ಅಡ್ಡಿಯಾದರೆ ಹಿರಿಯ ಕವಿ ಚನ್ನವೀರ ಕಣವಿ ಅವರನ್ನು ನೇಮಿಸುವ ಉದ್ದೇಶವೂ ಇದೆ. ಕೃಷ್ಣಭಟ್ ಅವರ ನೇಮಕ್ಕೆ ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ಸಂಘ ಪರಿವಾರದ ಹಿರಿಯ ಧುರೀಣ. ಒಬ್ಬ ಮಹಿಳೆಗೆ ಅವಕಾಶ ನೀಡುವ ಉದ್ದೇಶದಿಂದ ಕಲಾವಿದೆ ತಾರಾ ಅವರನ್ನು ನೇಮಿಸಲು ಬಹುತೇಕ ತೀರ್ಮಾನಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.











Click it and Unblock the Notifications