ಕೇಂದ್ರ ಬಜೆಟ್ ಫೆ.26ಕ್ಕೆ ಮಂಡನೆ: ವಿತ್ತಸಚಿವ ಪ್ರಣಬ್

Pranab Mukherjee
ನವದೆಹಲಿ, ಜ. 10: 2010-11 ನೇ ಸಾಲಿನ ಕೇಂದ್ರ ಸರ್ಕಾರದ ಮುಂಗಡ ಪತ್ರವನ್ನು ಫೆ. 26 ರಂದು ಮಂಡಿಸಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.ಶನಿವಾರ ನವದೆಹಲಿಯ ತಮ್ಮ ನಿವಾಸದಲ್ಲಿ ಪತ್ರಕರ್ತರಿಗೆ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಬಜೆಟ್ ಮಂಡನೆಯ ವಿಷಯವನ್ನು ತಿಳಿಸಿದರು.

ಸಾಮಾನ್ಯವಾಗಿ ಕೇಂದ್ರ ಮುಂಗಡಪತ್ರವನ್ನು ಫೆ.28ರಂದು ಮಂಡಿಸಲಾಗುತ್ತದೆ. ಆದರೆ, ಈ ಬಾರಿ ಫೆ.27 ರಂದು ಈದ್ ಮಿಲಾದ್ ಪ್ರಯುಕ್ತ ಸರ್ಕಾರಿ ರಜೆ ಹಾಗೂ ಫೆ. 28 ಭಾನುವಾರವಾದ್ದರಿಂದ ಎರಡು ದಿನ ಮುಂಚಿತವಾಗಿ ಬಜೆಟ್ಟನ್ನು ಮಂಡಿಸಲಾಗುತ್ತಿದೆ. ಬಜೆಟ್ ಮಂಡನೆ ದಿನಾಂಕವನ್ನು ಶೀಘ್ರವೇ ಸಂಪುಟ ಅನುಮೋದಿಸಲಿದೆ. ಪ್ರಸಕ್ತ ವರ್ಷ ಭಾರತದ ಆರ್ಥಿಕ ಪ್ರಗತಿ ತೃಪ್ತಿಕರವಾಗಿದೆ ಎಂದು ಮುಖರ್ಜಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+