ಟೊಗೊ ಫುಟ್ ಬಾಲ್ ತಂಡದ ಮೇಲೆ ಗುಂಡಿನ ದಾಳಿ
ಲಿಸ್ಬೆನ್,
ಜ.9: ಅಂಗೋಲಾದಲ್ಲಿ ಟೋಗೊ ಫುಟ್ ಬಾಲ್ ತಂಡದ ಮೇಲೆ ಲಿಬರೇಶನ್ ಆಫ್ ಎನ್ ಕ್ಲೇವ್ ಆಫ್ ಕಬಿಂಡಾಗೆ ಸೇರಿದ ಉಗ್ರವಾದಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ಕು ಮಂದಿ ಕ್ರೀಡಾಕಾರರು ಗಾಯಗೊಂಡಿದ್ದು ಒಬ್ಬ ಪ್ರಾಣ ಕಳೆದುಕೊಂಡಿದ್ದಾನೆ. id="toptextpromo">ಬೆಂಗಾವಲು
ಪಡೆಯೊಂದಿಗೆ ಫುಟ್ ಬಾಲ್ ತಂಡ ಕಬಿಂಡಾ ಪ್ರದೇಶಕ್ಕೆ ಬರುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲೇ ರಕ್ಷಣಾ ಪಡೆಯ ವಾಹನ ಚಾಲಕ ಮೃತಪಟ್ಟಿದ್ದಾನೆ. ತೀವ್ರವಾಗಿ ಗಾಯಗೊಂಡ ನಾಲ್ಕು ಮಂದಿ ಕ್ರೀಡಾಕಾರರನ್ನು ಚಿಕಿತ್ಸೆಗಾಗಿ ತಕ್ಷಣವೆ ಆಸ್ಪತ್ರೆಗೆ ದಾಖಲಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಆಫ್ರಿಕನ್
ಕಪ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಂದ ಟೋಗೊ ತಂಡ ಮೇಲೆ ಉಗ್ರರು ಮಾಡಿರುವ ದಾಳಿಯನ್ನು ಅಂಗೋಲಾ ಸರಕಾರ ತೀವ್ರವಾಗಿ ಖಂಡಿಸಿದೆ. ಆದರೆ ಇದು ಕೇವಲ ಆರಂಭ ಮಾತ್ರ ಮುಂದೆ ಈ ರೀತಿಯ ಸರಣಿ ದಾಳಿಗಳನ್ನು ಮಾಡುವುದಾಗಿ ಉಗ್ರರ ಸಂಘಟನೆ ಎಚ್ಚರಿಸಿದೆ.











Click it and Unblock the Notifications