ಇನ್ಫಿ, ಏರ್ ಸೆಲ್ ಮೊಬೈಲ್ ಅಪ್ಲಿಕೇಷನ್ ಸ್ಟೋರ್
ಬೆಂಗಳೂರು,
ಜ. 7 : ಮೊಬೈಲ್ ನಲ್ಲಿ ಮತ್ತಷ್ಟು ಅನುಕೂಲಗಳನ್ನು ಒದಗಿಸುವ ದೇಶದಲ್ಲೇ ಮೊಟ್ಟಮೊದಲನೆಯದಾದ ಮೊಬೈಲ್ ಅಪ್ಲಿಕೇಷನ್ ಸ್ಟೋರ್ ನ್ನು ಏರ್ ಸೆಲ್, ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಹಭಾಗಿತ್ವದಲ್ಲಿ ಆರಂಭಿಸಿದೆ. id="toptextpromo">ಈ
ಮೊಬೈಲ್ ಅಪ್ಲಿಕೇಷನ್ ಸ್ಟೋರ್ ಮೂಲಕ ಮೊಬೈಲ್ ನಲ್ಲಿ ಪಠ್ಯ ಮತ್ತು ಧ್ವನಿಯಾಧಾರಿತ ಎಸ್ಎಂಎಸ್, ಇಂಟರ್ ನೆಟ್ ಮತ್ತು ಜಿಪಿಆರ್ಎಸ್ ತಂತ್ರಜ್ಞಾನವನ್ನು ಅತಿ ಸುಲಭವಾಗಿ ಬಳಸುವ ಅಪ್ಲಿಕೇಷನ್ ಗಳನ್ನು ಖರೀದಿಸಬಹುದಾಗಿದೆ. ಇನ್ಫೋಸಿಸ್ ನೇತೃತ್ವದಲ್ಲಿ ಸಿದ್ಧಪಡಿಸಲಾದ ಮೊಬೈಲ್ ಅಪ್ಲಿಕೇಷನ್ ಗಳ ಪೈಕಿ ಭಾರತೀಯ ಗ್ರಾಹಕರಿಗೆ ಅಗತ್ಯವಿರುವ ಸಾಧನವನ್ನು ಆಯ್ದುಕೊಂಡು ಗ್ರಾಹಕರ ಅನುಕೂಲವನ್ನು ಹೆಚ್ಚಿಸಲು ಏರ್ ಸೆಲ್ ಆಧ್ಯತೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಹೊಸ
ಔದ್ಯಮಿಕ ಅವಕಾಶಗಳನ್ನು ಅನ್ವೇಷಿಸಲು ಈ ಅಪ್ಲಿಕೇಷನ್ ಪ್ಲಾಟ್ ಫಾರಂ ನೆರವಾಗಲಿದೆ ಎಂದು ಇನ್ಫೋಸಿಸ್ ಹೇಳಿದೆ. ಏರ್ ಸೆಲ್ ಇದೇ ಮಾದರಿಯ ಅಪ್ಲಿಕೇಷನ್ ಸ್ಟೋರ್ ಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಕಡೆಗಳಲ್ಲಿ ಹೊಂದಿದೆ. ಈ ಸ್ಟೋರ್ ಮೂಲಕ ಗ್ರಾಹಕರು ತಮಗೆ ಅನುಕೂಲವಾಗುವ ಅಪ್ಲಿಕೇಷನ್ ಗಳನ್ನು ಆಯ್ದುಕೊಳ್ಳಬಹುದು ಎಂದು ಏರ್ ಸೆಲ್ ಸಿಒಒ ಗುರುದೀಪ್ ಸಿಂಗ್ ತಿಳಿಸಿದ್ದಾರೆ.











Click it and Unblock the Notifications