ಐಐಎಂ ಇಂಧೋರ್ ಪ್ರಾಧ್ಯಾಪಕಿ ಭೀಕರ ಹತ್ಯೆ

ಬೆಳಗ್ಗೆ ಕೆಲಸದಾಕೆ ಮನೆಗೆ ಬಂದಾಗ ಅಮೃತಾ ಪಾಂಚೋಲಿ(32) ಅವರ ಮನೆಯ ಬಾಗಿಲು ತೆರೆದಿತ್ತು. ಆಕೆ ಒಳಗ ಹೋಗಿ ನೋಡಿದಾಗ ಪಾಂಚೋಲಿ ಕೊಲೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ ಅವರ ಮೇಲೆ ಅಪರಿಚಿತ ದುರ್ಷರ್ಮಿಗಳು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದಾರೆ. ಗುಪ್ತಾಂಗ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಚಾಕುವಿನಿಂದ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.












Click it and Unblock the Notifications