ನಪಾಸಾಗುವ ಭಯ : ಕೆರೆಗೆ ಹಾರಿದ ವಿದ್ಯಾರ್ಥಿನಿ
ಮಡಿಕೇರಿ,
ಡಿ. 19 : ಪರೀಕ್ಷೆಯಲ್ಲಿ ಫೇಲಾಗುವೆನೆಂಬ ಭಯದಿಂದ ಇಂಜಿನಿಯರಿಂಗ್ ಕಾಲೇಜಿನ ಯುವತಿಯೊಬ್ಬಳು ಕಾಲೇಜಿನ ಬಳಿಯ ಕೆರೆಗೆ ಹಾರಿರುವ ಘಟನೆ ಗೋಣಿಕೊಪ್ಪದಲ್ಲಿ ಶುಕ್ರವಾರ ನಡೆದಿದೆ. id="toptextpromo">ಪ್ರತಿಭಾವಂತ
ವಿದ್ಯಾರ್ಥಿನಿಯಾಗಿರುವ ರಶ್ಮಿ ಪೊನ್ನಂಪೇಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ. ಹಿಂದಿನ ಪರೀಕ್ಷೆಗಳಲ್ಲೆಲ್ಲ ಉತ್ತಮ ಅಂಕಗಳನ್ನೇ ತೆಗೆದಿದ್ದಳು. ಆದರೆ, ಕಳೆದ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯಲಿಲ್ಲವೆಂಬ ಕೊರಗು ಆಕೆಯನ್ನು ಕಾಡುತ್ತಿತ್ತು. ಅದನ್ನು ಆಕೆಯ ಕೆಲ ಗೆಳತಿಯರಿಗೆ ಕೂಡ ಹೇಳಿದ್ದಳು. id='are-slot-1' class='oiad oi-axt oiadv'> id='top-searched-articles'>ಆದರೆ,
ಶುಕ್ರವಾರದಿಂದ ಆಕೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಕೆರೆಯ ಬಳಿ ರಶ್ಮಿಗೆ ಸೇರಿದ ಮೊಬೈಲ್ ಮತ್ತು ಚಪ್ಪಲಿಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆರೆಯಲ್ಲಿ ಆಕೆಯ ದೇಹಕ್ಕಾಗಿ ಹುಡುಕಾಟ ಸಾಗಿದೆ.











Click it and Unblock the Notifications