ಸಿದ್ದು ಮುಂದಿನ ಸಿಎಂ : ಧರಂ ಸಿಂಗ್

Dharam Singh
ಗುಲ್ಬರ್ಗಾ, ಡಿ. 18: 'ಸಿದ್ದು ಮುಂದಿನ ಸಿಎಂ' ಎಂದು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು "ನಂಗೆ ಭವಿಷ್ಯ ಗೊತ್ತಿಲ್ಲ. ಬಿಜೆಪಿ ಸರ್ಕಾರ ಬಹುಮತದಲ್ಲಿದೆ. ಸರ್ಕಾರ ಬೀಳಿಸೊ ಕೆಲ್ಸ ಮಾಡುವುದಿಲ್ಲ. ಬಿಜೆಪಿಯ ಬಿಕ್ಕಟ್ಟು ಮಿತಿ ಮೀರಿದೆ ಎಂಬುದಂತೂ ಸತ್ಯ. ಬಿಜೆಪಿಯಲ್ಲಿ ಈಗ ಮೂರನೇ ಗುಂಪು ರಚನೆಯಾಗಿದೆ. ಯಡಿಯೂರಪ್ಪ ಅವರಿಗೆ ಕಷ್ಟಕಾಲ ಆರಂಭವಾಗಿದೆ" ಎಂದು ಹೇಳಿದರು.

ಇದಕ್ಕೂ ಮುನ್ನ ಗುಲ್ಬರ್ಗಾದಲ್ಲಿ ಪರ್ಯಾಯ ಸರ್ಕಾರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಧರಂಸಿಂಗ್ ಅವರು, ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದರೆ ಸ್ವಾಭಾವಿಕವಾಗಿ ಸಿಎಂ ಪಟ್ಟ ಅವರಿಗೆ ಸಿಗುತ್ತದೆ ಎಂದಿದ್ದರು. ಆದರೆ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಪರ್ಯಾಯ ಸರ್ಕಾರದ ರಚನೆ ಪ್ರಕ್ರಿಯೆ ನಡೆದಿಲ್ಲ. ಈ ಬಗ್ಗೆ ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ. ವರಿಷ್ಠರ ನಿರ್ಧಾರವಷ್ಟೇ ಮುಂದಿನ ನಡೆ ಎಂದರು. ಖರ್ಗೆ ಅವರ ಮಾತಿಗೆ ಕಾಂಗ್ರೆಸ್ ಮುಖಂಡ ಹರಿಪ್ರಸಾದ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪರಿಷತ್ ಚುನಾವಣೆ:
ಕಾಂಗ್ರೆಸ್ ಗೆ ಕನಿಷ್ಠವೆಂದರೂ 15 ರಿಂದ 17 ಸ್ಥಾನಗಳು ಲಭಿಸವಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಬಿಜೆಪಿ ಕೂಡ ಇದೇ ವಿಶ್ವಾಸದಲ್ಲಿದ್ದು 12-14 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಹೊಂದಿದೆ. 23 ಸ್ಥಾನಗಳಿಗೆ ಇಂದು ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಶಾಂತಿಯುತವಾಗಿ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+