ನಕ್ಸಲರು ಡಿ.30ರ ತನಕ ನ್ಯಾಯಾಂಗ ವಶಕ್ಕೆ

ಆರೋಪಿಗಳಾದ ಕಿರಣ್ ಅಲಿಯಾಸ್ ಮಲ್ಲೇಶ್, ದೇವೇಂದ್ರಪ್ಪ, ಆಶಾ, ಗಂಗಮ್ಮ, ಅನಿತಾ, ಜಗನ್ನಾಥರವರನ್ನು ಡಿ.4ರಂದು ಹದಿಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಪೊಲೀಸ್ ಕಸ್ಟಡಿಯ ಅವಧಿ ಮುಗಿದ ಕಾರಣ ಇಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ವಾದ-ವಿವಾದಗಳನ್ನು ಪರಿಶೀಲಿಸಿದ ಎರಡನೇ ನ್ಯಾಯಾಲಯದ ಪ್ರಧಾನ ದರ್ಜೆ ನ್ಯಾಯಿಕ ದಂಡಾಧೀಶರಾದ ಅರ್ಜುನ್ ಮಳ್ಳರ್ ಆರೋಪಿಗಳನ್ನು ಡಿ.30ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಆದೇಶಿಸಿದ್ದಾರೆ.
ಪೊಲೀಸರಿಂದ ನ್ಯಾಯಾಂಗ ನಿಂದನೆ
ನ್ಯಾಯಾಲಯದ ಆದೇಶವಿಲ್ಲದೆ ನಾಲ್ಕು ಮಂದಿ ನಕ್ಸಲ್ ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಂಗ ನಿಂದನೆ ಮಾಡುವ ಮೂಲಕ ಕಾನೂನು ಬಾಹಿರವಾಗಿ ನಡೆದುಕೊಂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳವಂತೆ ಆರೋಪಿಗಳ ಪರ ವಕೀಲ ಈಸೂರು ಲೋಕೇಶ್ ಮನವಿ ಮಾಡಿದ್ದಾರೆ.












Click it and Unblock the Notifications