ಓಎಂಸಿ ವಿರುದ್ಧ ಕಠಿಣ ಕ್ರಮ: ಕೇಂದ್ರ ಸರಕಾರ

ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ (ಫೆಮಾ) ಅನ್ವಯ ಕಂಪನಿ ವಿರುದ್ದ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂಬ ರಾಜ್ಯಸಭಾ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಫೆಮಾ ಕಾಯ್ದೆಗೆ ಸಂಬಂಧಿಸಿದಂತೆ ಒಎಂಸಿ ವಿರುದ್ಧ ವಿಚಾರಣೆ ನಡೆಸುವುದಾಗಿ ಹೇಳಿದರು. ಫೆಮಾ ಉಲ್ಲಂಘನೆ ಪ್ರಕರಣಗಳೆಲ್ಲವೂ ಕಸ್ಟಮ್ಸ್ ಕಾನೂನು ವ್ಯಾಪ್ತಿಗೆ ಒಳಪಡುತ್ತದೆ. ಕಸ್ಟಮ್ಸ್ ಅಧಿಕಾರಿಗಳು ಈ ಪ್ರಕರಣದ ವಿಚಾರಣೆ ನಡೆಸುವರು ಎಂದು ಅವರು ವಿವರಿಸಿದರು.
ಅಕ್ರಮ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದಿಂದ ಸಿಐಬಿ ತನಿಖೆ ನಡೆಸುವಂತೆ ಮನವಿ ಬಂದಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಸಿದ್ಧವಿದೆ ಎಂದು ಅವರು ಸ್ಪಷ್ಟಪಡಿಸಿದರು. ಸಚಿವರಾಗಿ ರೆಡ್ಡಿ ಸಹೋದರರು ಮುಂದುವರಿಕೆ ಕುರಿತು ಸಿಪಿಐನ ರಾಜಾ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನೀತಿ ಸಂಹಿತೆ ಉಲ್ಲಂಘನೆಯಾಗಿದ್ದಲ್ಲಿ, ಅದನ್ನು ರಾಜ್ಯಪಾಲರ ಗಮನಕ್ಕೆ ತರುವಂತೆ ಸೂಚಿಸಿದರು. ರೆಡ್ಡಿ ಸಹೋದರರ ಮುಂದುವರಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಸಂಸತ್ ಸೂಕ್ತ ಸ್ಥಳವಿಲ್ಲ. ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಬಹುದು ಎಂದರು.
(ಏಜನ್ಸೀಸ್)












Click it and Unblock the Notifications