ಗಣಿಗಾರಿಕೆ ನಿಷೇಧ : ಹೈದರಾಬಾದ್ ಹೈಕೋರ್ಟ್ ಕಿಡಿ

ಗಣಿಗಾರಿಕೆ ನಿಲ್ಲಿಸುವಂತೆ ಆದೇಶಿಸಲು ಸಮಿತಿ ನೀಡಿದ ವರದಿಯ ಹೊರತಾಗಿ ಬೇರೆ ಯಾವ ಆಧಾರಗಳಿವೆ ಎಂದು ಕೇಂದ್ರ ಸರಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಮುಂಚಿತವಾಗಿ ನೋಟಿಸ್ ಜಾರಿ ಮಾಡದೆ, ಯಾವುದೇ ಕಾರಣ ನೀಡದೆ ಗಣಿಗಾರಿಕೆ ಹೇಗೆ ನಿಲ್ಲಿಸುತ್ತೀರಿ ಎಂದು ಕೇಂದ್ರವನ್ನು ಹೈಕೋರ್ಟ್ ಪ್ರಶ್ನಿಸಿದೆ.
ಈ ವಿಷಯದಲ್ಲಿ ವೈಜ್ಞಾನಿಕ ನಿರ್ಣಯ ತೆಗೆದುಕೊಂಡಂತೆ ಕಾಣುತ್ತಿಲ್ಲ ಎಂದಿರುವ ಹೈಕೋರ್ಟ್, ಒಎಂಸಿ ಅಥವಾ ಯಾವುದೇ ಕಂಪನಿ ಅಕ್ರಮ ಗಣಿಗಾರಿಕೆ ನಡೆಸುತ್ತಿದೆ ಎಂದು ದೂರು ಬಂದಿದೆಯೇ? ಇದರ ಬಗ್ಗೆ ಪ್ರಾಥಮಿಕ ಮಾಹಿತಿ ಇದೆಯೇ ಎಂದಿದೆ. ಕೇವಲ ಸಮಿತಿ ನೀಡಿದ ವರದಿಗಳನ್ನು ಆಧಾರವಾಗಿರಿಸಿಕೊಂಡು, ಗಣಿಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆಯನ್ನು ಕೇಂದ್ರ ಸರಕಾರ ರದ್ದುಗೊಳಿಸಿದಂತೆ ಕಾಣುತ್ತಿದೆ. ಉನ್ನತಾಧಿಕಾರ ಸಮಿತಿ ಕೈಗೊಂಡ ಕ್ರಮಗಳಲ್ಲೂ ಅಪಸವ್ಯ ವಾಗಿದೆ. ಸಮಿತಿ ತನ್ನ ಅಧಿಕಾರ ವ್ಯಾಪ್ತಿ ಮೀರಿ ವ್ಯವಹರಿಸುತ್ತಿದೆ ಎಂದುಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಓಬಳಾಪುರಂ ಮೈನಿಂಗ್ ಪ್ರಾಂತ್ಯದಲ್ಲಿ ಲೀಸ್ ವ್ಯಾಪ್ತಿ ಗುರುತಿಸಿ ಖಚಿತಪಡಿಸುವ ತನಕ ಗಣಿಗಾರಿಕೆಗೆ ನೀಡಿದ ಅನುಮತಿ ಹಾಗೂ ಈಗಾಗಲೇ ಅಗೆದಿಟ್ಟ ಅದಿರು ರವಾನಿಸುವುದನ್ನು ನಿರ್ಬಂಧಿಸಿ, ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಕಳೆದ 30 ರಂದು ಪತ್ರ ಬರೆದಿದೆ. ಸಮಿತಿಗಿರುವ ಅಧಿಕಾರವಾದರೂ ಏನು? ಅರ್ಹತೆಗಳೇನು? ಗಣಿಗಾರಿಕೆ ನಿಲ್ಲಿಸಲು ಅಧಿಕಾರ ನೀಡಿದವರು ಯಾರು? ಈ ಸಮಿತಿಗೆ ಇರುವ ಬೆಲೆಯಾದರೂ ಏನು? ಎಂದು ಅನೇಕ ಪ್ರಶ್ನೆಗಳು ಎದುರಾಗಿವೆ.
(ಏಜನ್ಸೀಸ್)











Click it and Unblock the Notifications