ಠಾಕ್ರೆಗೆ ಮುಖಭಂಗ , ಸೊಸೆ ಕಾಂಗ್ರೆಸ್ ಗೆ 'ಜೈ'

ಅತ್ಯಂತ ಅಚ್ಚರಿಯ ಬೆಳವಣಿಗೆಯಲ್ಲಿ, ಶಿವಸೇನೆಯ ಸಂಕುಚಿತ ಮತ್ತು ವಿಭಜಕ ನೀತಿಯಿಂದ ಮರಾಠಿಗರಿಗೆ ಅನ್ಯಾಯವಾಗುತ್ತಿದೆ. ನಾನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಬಹು ದೊಡ್ಡ ಅಭಿಮಾನಿಯಾಗಿದ್ದು, ಕಾಂಗ್ರೆಸ್ ಪಕ್ಷದ ಮೂಲಕ ದೇಶ ಸೇವೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ಹೇಳಿಕೆ ನೀಡಿ ಶಿವಸೇನೆ ವರಿಷ್ಠರು ಬೆಚ್ಚಿ ಬೀಳುವಂತೆ ಮಾಡಿದ್ದಾರೆ.
ಕಾಂಗ್ರೆಸ್ ಸಿದ್ಧಾಂತ ತೃಪ್ತಿದಾಯಕವಾಗಿದೆ. ಸೋನಿಯಾ ಗಾಂಧಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೀತಿಗೆ ದೇಶಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಮುಂಬೈ ದಾಳಿ ನಂತರ ಕಾಂಗ್ರೆಸ್ ಸರ್ಕಾರ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ನಾನು ಶೀಘ್ರ ದೆಹಲಿಗೆ ತೆರಳಿ ಸೋನಿಅಯಾ ರಾಹುಲ್ ಗಾಂಧಿ ಅವರನ್ನು ಭೇಟಿ ಆಗುತ್ತೇನೆ ಎಂದು ಸ್ಮಿತಾ ಠಾಕ್ರೆ ಹೇಳಿಕೆ ನೀಡಿದ್ದಾರೆ.
ಆದರೆ, ಮೂಲಗಳ ಪ್ರಕಾರ ಸ್ಮಿತಾ ಠಾಕ್ರೆ ಅವರು ರಾಜ್ಯಸಭಾ ಸ್ಥಾನದಿಂದ ವಂಚಿತರಾಗಿರುವುದು ಅವರಿಗೆ ತೀವ್ರ ನಿರಾಸೆಯಾಗಿದೆ ಎನ್ನಲಾಗಿದೆ. ಕಳೆದ ವರ್ಷ ರಾಜ್ಯಸಭೆಗೆ ಅನುಮೋದನೆ ಸಿಗುವ ಬಗ್ಗೆ ಶಿವಸೇನಾ ವರಿಷ್ಠರಿಂದ ಆಶ್ವಾಸನೆ ಸಿಕ್ಕಿತ್ತು, ಆದರೆ ಪತ್ರಕರ್ತಭರತ್ ಕುಮಾರ್ ರೌತ್ ಅವರನ್ನು ಆರಿಸಿ ಕಳಿಸಲಾಗಿತ್ತು. ಇದರಿಂದ ಸ್ಮಿತಾ ಸಹಜವಾಗಿ ಅಪಮಾನಗೊಂಡಿದ್ದರು ಎಂದು ತಿಳಿದುಬಂದಿದೆ.
(ಏಜೆನ್ಸೀಸ್)












Click it and Unblock the Notifications