ತಿರುಪತಿ: ನಾಲ್ಕು ಐಎಸ್ಐ ಏಜಂಟ್ ರ ಬಂಧನ
ತಿರುಮಲ/ತಿರುಪತಿ,
ನ. 27 : ಮಹತ್ವ ಕಾರ್ಯಾಚರಣೆಯೊಂದರಲ್ಲಿ ಅಕ್ಟೋಪಸ್ ಕಮಾಂಡೋ ಪಡೆ ನಗರದ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದ ನಾಲ್ಕು ಮಂದಿ ಐಎಸ್ಐ ಏಜಂಟ್ ರನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಹೈದರಾಬಾದ್ ಗೆ ಕರೆದೊಯ್ಯಲಾಗಿದ್ದು, ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. id="toptextpromo">ಆದರೆ,
ನಗರದ ಹೋಟೆಲ್ ನಲ್ಲಿ ತಂಗಿದ್ದ ಐಎಸ್ಐ ಏಜೆಂಟ್ ರ ಬಗ್ಗೆ ಪೊಲೀಸರು ಅಧಿಕೃತವಾಗಿ ತಿಳಿಸಿಲ್ಲ. ಆದರೆ, ವಿಚಾರಣೆ ನಂತರ ಎಲ್ಲ ವಿಚಾರಗಳನ್ನು ಮಾಧ್ಯಮ ಮುಂದೆ ವಿವರಿಸುವ ಸಾಧ್ಯತೆ ಇದೆ. ತಿರುಪತಿ ಭಾರತದ ಜನಪ್ರಿಯ ಹಾಗೂ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿ ದಿನ 65ಕ್ಕೂ ಹೆಚ್ಚು ಸಾವಿರ ಭಕ್ತಾಧಿಗಳು ಭೇಟಿ ನೀಡುತ್ತಾರೆ. ಇಂತಹ ಜನಜಂಗುಳಿ ಇರುವ ಧಾರ್ಮಿಕ ಕ್ಷೇತ್ರದ ಮೇಲೆ ಉಗ್ರರ ಕಣ್ಣು ಬಿದ್ದು ಅನೇಕ ದಿನಗಳಾಗಿವೆ. ಹೀಗಾಗಿ ತಿರುಪತಿಯಲ್ಲಿ ಭಾರಿ ಬಿಗಿ ಭದ್ರತೆಯನ್ನು ಆಂಧ್ರಸರಕಾರ ನಿಯೋಜಿಸಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications