ಅಸ್ಸಾಂನಲ್ಲಿ ಸರಣಿ ಸ್ಫೋಟ; 6 ಸಾವು
ಗುವಾಹಟಿ,
ನ. 22 : ನಲ್ಬಾರಿ ಜಿಲ್ಲೆಯಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ್ದು, ಪೊಲೀಸ್ ಠಾಣೆಯ ಪಕ್ಕದಲ್ಲಿ ಸೇರಿ ಮೂರು ಕಡೆಗಳಲ್ಲಿ ಬಾಂಬ್ ಸ್ಫೋಟವಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚೂ ಮಂದಿ ಗಾಯಗೊಂಡಿದ್ದಾರೆ. ಉಲ್ಫಾ ಉಗ್ರರ ಕೃತ್ಯ ಎಂದು ಪೊಲೀಸರು ಶಂಕಿಸಿದ್ದಾರೆ. id="toptextpromo">ಇಂದು
ಬೆಳಗ್ಗೆ 10.15ಕ್ಕೆ ನಲ್ಬಾರಿ ಪೊಲೀಸ್ ಠಾಣೆ ಪಕ್ಕದಲ್ಲಿ ಮೊದಲೆಡು ಬಾಂಬ್ ಸ್ಫೋಟ ಸಂಭವಿಸಿದೆ. ನಂತರ ಕೆಲ ಹೊತ್ತಿನಲ್ಲೇ ಗೋಪಾಲ್ ಬಜಾರ್ ನಲ್ಲಿ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ. ಸೈಕಲ್ ನಲ್ಲಿ ಬಾಂಬ್ ಗಳನ್ನು ಇರಿಸಿ ಸ್ಫೋಟಗೊಳಿಸಲಾಗಿದೆ. ಉಲ್ಫಾ ಉಗ್ರರೆ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿರುವ ಪೊಲೀಸರು ಉಗ್ರರ ಬಂಧನಕ್ಕೆ ವ್ಯಾಪಕ ಜಾಲ ಬೀಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications