'ವಂದೇ ಮಾತರಂ'ಫತ್ವಾಗೆ ಸಚಿವ ಸಲ್ಮಾನ್ ವಿರೋಧ

Salman Khurshid on Vande Mataram
ನವದೆಹಲಿ, ನ.16: ರಾಷ್ಟ್ರದ ಹೆಮ್ಮೆ, ದೇಶಭಕ್ತಿ ಮತ್ತು ಬದ್ಧತೆಯೊಂದಿಗೆ ತಾವು 'ವಂದೇ ಮಾತರಂ' ಹಾಡುವುದಾಗಿ ಹೇಳಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್, ಮುಸ್ಲಿಮರು ವಂದೇ ಮಾತರಂ ಗೀತೆ ಹಾಡದಂತೆ ಜಮಾತ್ ಉಲೇಮಾ ಹಿಂದ್ (ಜೆಯುಎಚ್) ಹೊರಡಿಸಿರುವ ಫತ್ವಾಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದು ಒಪ್ಪುವಂತಹದ್ದಲ್ಲ ಎಂದಿರುವ ಅವರು, ಜೆಯುಎಚ್ ಸಂಘಟನೆ ಎರಡು ಬಣಗಳಾಗಿ ಒಡೆದು ಹೋಗಿರುವುದರಿಂದ ಈ ಅಭಿಪ್ರಾಯ ಇಡೀ ಸಂಘಟನೆಯನ್ನು ಧ್ವನಿಸುವ ಸಾಧ್ಯತೆಯಿಲ್ಲ. ಈ ಬೆಳವಣಿಗೆ ನಮ್ಮ ಸಮಾಜ ಅಥವಾ ದೇಶಕ್ಕೆ ಮಾತ್ರವಲ್ಲ, ಮುಸ್ಲಿಮರಿಗೂ ಒಳ್ಳೆಯದಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಗೀತೆಯನ್ನು ಹಾಡುವಂತೆ ಅಥವಾ ಹಾಡದಿರುವಂತೆ ಒತ್ತಡ ಹೇರುವುದು ಸರಿಯಲ್ಲ. ಕೆಲವರು ಮುಸ್ಲಿಮರನ್ನು ಪ್ರಚೋದಿಸುವ ಸಲುವಾಗಿಯೇ ವಂದೇ ಮಾತರಂ ಹಾಡುತ್ತಾರೆ ಎನ್ನುವ ಸಂಘಟನೆಯ ಹೇಳಿಕೆಗೆ ನನ್ನ ವಿರೋಧವಿದೆ ಎಂದು ಸಚಿವ ಖುರ್ಷಿದ್ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+