ಹೆಡ್ಲೇ ವಿರುದ್ಧ ಎನ್ಐಎ ದಾಖಲು, ಚಿದು

ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಡೆವಿಡ್ ಕೋಲಮನ್ ಹೆಡ್ಲೇ ಮತ್ತು ಆತನ ಸ್ನೇಹಿತ ಪಾಕಿಸ್ತಾನದ ಮೂಲದ ಕೆನಡಾ ಪ್ರಜೆ ತವಾಹರ್ ಹುಸೇನ್ ರಾಣಾ ಭಾರತದ ಪ್ರಮುಖ ಸ್ಥಳಗಳ ಭಯೋತ್ಪಾದನಾ ಕೃತ್ಯ ನಡೆಸಲು ಸಂಚು ರೂಪಿಸಿರುವ ಸಂಗತಿ ದೃಡಪಟ್ಟಿದೆ ಎಂದರು.
ಹೆಡ್ಲೇ ಭಾರತಕ್ಕೆ ಅನೇಕ ಸಾರಿ ಭೇಟಿ ನೀಡಿದ್ದಾನೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೂ ಮುಂಚೆ ಭೇಟಿ ನೀಡಿರುವುದು ಅಮೆರಿಕದ ಎಫ್ ಬಿಐ ನಡೆಸಿದ ವಿಚಾರಣೆ ತಿಳಿದುಬಂದಿದೆ. ಲಷ್ಕರ ಸಂಘಟನೆಯೊಂದಿಗೆ ಸಂಪರ್ಕವಿರುವುದು ಖಚಿತವಾಗಿದೆ. ಭಾರತೀಯ ರಕ್ಷಣಾ ಕಾಲೇಜು ಮತ್ತು ಡೆಹ್ರಾಡೂನ್ ನ ಶಾಲೆ ಮೇಲೆ ದಾಳಿ ನಡೆಸಲು ಹೆಡ್ಲೇ ಸಂಚು ರೂಪಿಸಿದ್ದ ಎಂದು ಅಮೆರಿಕ ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾಗಿದೆ.
(ಏಜನ್ಸೀಸ್)












Click it and Unblock the Notifications