ಮೂರನೇ ಬಾರಿ ಕಣ್ಣೀರಿಟ್ಟ ಸಿಎಂ
ಬೆಂಗಳೂರು,
ನ. 8 : ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ನವದೆಹಲಿಯಲ್ಲಿಯೇ ಉಳಿದಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತ್ತೊಮ್ಮೆ ಕಣ್ಣೀರಿಟ್ಟ ಘಟನೆ ನಡೆಯಿತು. ಕುರ್ಚಿ ಉಳಿಸಿಕೊಳ್ಳಲು ನಂಬಿದವರನ್ನು ಕೈಬಿಡಬೇಕಾಯಿತು ಎಂದು ಅವರು ಗಳಗಳನೆ ಅತ್ತ ಪ್ರಸಂಗ ಜರುಗಿತು. id="toptextpromo">ಬೆಳಗ್ಗೆ
ವೈಷ್ಣೋ ದೇವಾಲಯಕ್ಕೆ ಹೊರಡುವ ಮುನ್ನ ಮಾತನಾಡಿದ ಅವರು, ಸಚಿವೆ ಶೋಭಾ ಕರಂದ್ಲಾಜೆ, ತಮ್ಮ ಪ್ರಧಾನ ಕಾರ್ಯದರ್ಶಿ ವಿ ಪಿ ಬಳಿಗಾರ್ ನನ್ನನ್ನು ನಂಬಿದ್ದರು. ಆದರೆ, ಸ್ವಾರ್ಥ ರಾಜಕೀಯಕ್ಕಾಗಿ ಅವರನ್ನು ಬಲಿ ಕೊಟ್ಟೆ, ದೇವರು ಖಂಡಿತಾ ನನ್ನನ್ನು ಕ್ಷಮಿಸುವುದಿಲ್ಲ ಎಂದು ಗದ್ಗಿದಿತರಾದರು. ಹಿರಿಯ ವರಿಷ್ಠರ ಮಾತಿಗೆ ಕಟ್ಟುಬಿದ್ದು ಈ ಕೆಲಸ ಮಾಡಬೇಕಾಯಿತು ಎಂದು ಸಮರ್ಥನೆ ಮಾಡಿಕೊಳ್ಳುವ ಮೂಲಕ ಸಮಾಧಾನ ಮಾಡಿಕೊಂಡರು. ಅನಂತರ ಮುಖ ತೊಳೆದು ದೇವಾಲಯಕ್ಕೆ ಪ್ರಯಾಣ ಬೆಳೆಸಿದರು. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications