ಶಾಪಗ್ರಸ್ತ ದೇವರ ಖಾತೆ ಆಚಾರ್ಯರ ಕೈಗೆ

ಸದ್ಯದ ರಾಜಕೀಯ ಬಿಕ್ಕಟ್ಟಿನಲ್ಲಿ ಸಿಎಂ ತಮ್ಮ ಹೊಣೆಯಲ್ಲಿದ್ದ ಈ ಹೆಚ್ಚುವರಿ ಖಾತೆಯನ್ನು ತರಾತುರಿಯಲ್ಲಿ ಆಚಾರ್ಯಗೆ ವಹಿಸಿ ಶನಿವಾರವೇ (ಅ 31) ಆದೇಶ ಹೊರಡಿಸಿದ್ದಾರೆ. ವೈದ್ಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಈ ಖಾತೆ ವಹಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಚಾರ್ಯಗೆ ಮುಜರಾಯಿ ಖಾತೆ ಬೇಡವೆಂದರೂ ಒಲಿದು ಬಂದಿದೆ.
ಮುಜರಾಯಿ ಖಾತೆ ವಹಿಸಿಕೊಂಡ ಸಚಿವರುಗಳು ನಂತರದ ಚುನಾವಣೆಯಲ್ಲಿ ಸೋಲುಂಡ ಸಂಪ್ರದಾಯಗಳು ಬೆಳೆದು ಬಂದಿದೆ. ಕುಮಾರಸ್ವಾಮಿ ಸರಕಾರದಲ್ಲಿ ಮುಜರಾಯಿ ಸಚಿವರಾಗಿದ್ದ ನಾಗರಾಜ ಶೆಟ್ಟಿ, ಇದಕ್ಕೂ ಮೊದಲು ಈ ಖಾತೆ ವಹಿಸಿಕೊಂಡಿದ್ದ ಸುಮಾ ವಸಂತ್, ಎಂಪಿ ಪ್ರಕಾಶ್ ನಂತರದ ಚುನಾವಣೆಯಲ್ಲಿ ಸೋಲುಂಡಿದ್ದರು. ಈ ಸಂಪ್ರದಾಯಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿ, ಈ ಖಾತೆ ವಹಿಸಿಕೊಂಡು ನಂತರದ ಚುನಾವಣೆಯಲ್ಲಿ ಗೋವಿಂದರಾಜನಗರದಿಂದ ಸ್ಪರ್ಧಿಸಿ ಸೋತಿರುವುದು 'ಸೋಲಿಲ್ಲದ ಸರದಾರ' ವಿ ಸೋಮಣ್ಣ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications