ನಾಯಕತ್ವ ಬದಲಾವಣೆ ಇಲ್ಲ : ಬಿಜೆಪಿ

Yeddyurappa to stay, say BJP leaders
ಬೆಂಗಳೂರು, ನ.2 : ನಾಯಕತ್ವ ಬದಲಾವಣೆ ಇಲ್ಲ ಎಂದು ಭಿನ್ನರಿಗೆ ಸ್ಪಷ್ಟಪಡಿಸಿರುವ ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್ ಸಂಪುಟ ಸೇರುವಂತೆ ಮನವೂಲಿಸಲು ಮುಂದಾಗಿದೆ. ಆದರೆ, ಇತ್ತ ರೆಡ್ಡಿಗಳು ಹೈಕಮಾಂಡ್ ಗೆ ಸೆಡ್ಡು ಹೊಡೆಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರಿಂದ ಬಿಜೆಪಿ ಬಿಕ್ಕಟ್ಟು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಹೈಕಮಾಂಡ್ ತೀರ್ಮಾನವನ್ನು ತಳ್ಳಿಹಾಕಿರುವ ಶೆಟ್ಟರ್, ನಾಯಕತ್ವ ಬದಲಾವಣೆ ವಿಷಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುವಂತೆ ಆಗ್ರಹಿಸಿದ್ದಾರೆ. ತಾವು ಸಚಿವ ಸ್ಥಾನದ ಅಕಾಂಕ್ಷಿಯಲ್ಲ ಎಂದು ವರಿಷ್ಠರಿಗೆ ಇದೇ ಸಂದರ್ಭದಲ್ಲಿ ಮನವರಿಕೆ ಮಾಡಿದ್ದಾರೆ. ಇದರಿಂದ ಬಿಕ್ಕಟ್ಟು ಪರಿಹರಿಸುವುದು ವರಿಷ್ಠರಿಗೆ ಕಗ್ಗಂಟಾಗಿದೆ. ಇನ್ನೊಂದಡೆ ರೆಡ್ಡಿ ಮತ್ತು ಯಡಿಯೂರಪ್ಪ ಅವರ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರಿಯುತ್ತಲೇ ಇವೆ.

ನಾಯಕತ್ವ ಬದಲಾವಣೆಗ ಪಟ್ಟು ಹಿಡಿದಿರುವ ರೆಡ್ಡಿ ಸಹೋದರರು ಇಂದು ನವದೆಹಲಿಗೆ ತೆರಳುವ ಸಂಭವವಿದೆ. ತಮ್ಮ ಬಳಿ ಸಾಕಷ್ಟು ಸಂಖ್ಯೆ ಇದೆ. ಅವರೆಲ್ಲಾ ಮುಖ್ಯಮಂತ್ರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ಹೈಕಮಾಂಡ್ ಮತ್ತೊಮ್ಮೆ ಸ್ಪಷ್ಟಪಡಿಸಿದರೆ, ಬಂಡಾಯವೆದ್ದಿರುವ ರೆಡ್ಡಿಗಳು ಯಾವ ಹಾದಿ ತುಳಿಯುತ್ತಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+