ರೆಡ್ಡಿ ಸಹೋದರರಿಗಾಗಿ ಪ್ರಾಣ ಬಿಡುತ್ತೇವೆ

ಗುಡುಗಿದ್ದಾರೆ.
ಐದು ವರ್ಷ ಸುಭದ್ರ ಸರ್ಕಾರ ಇರಲಿ ಎಂಬ ಒಂದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆವು. ಈ ಭಾಗದ ಸಮಸ್ಯೆಗಳ ಪರಿಹಾರ, ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದಾಗಲೆಲ್ಲಾ ಯಡಿಯೂರಪ್ಪ ಸ್ಪಂದಿಸುತ್ತಿರಲಿಲ್ಲ ಅಷ್ಟೇ ಯಾಕೆ ಸಭೆಯ ನಡುವೆಯೇ ಎಷ್ಟೋ ಸಲ ಎದ್ದು ಹೋಗುತ್ತಿದ್ದರು. ಮುಖ್ಯಮಂತ್ರಿ ಆದ ಬಳಿಕ ನಿಮ್ಮ ಕ್ಷೇತ್ರದ ಜನ ಅಥವಾ ಅಭಿವೃದ್ದಿ ಕೆಲಸ ನಡೆಯುತ್ತಿದೆಯೇ ಎಂದು ಕೇಳುವ ಕನಿಷ್ಟ ಸೌಜನ್ಯ ಕೂಡ ಅವರಿಗಿಲ್ಲ ಎಂದು ನಾಯಕ್ ತಮ್ಮ ನೋವು ತೋಡಿಕೊಂಡಿದ್ದಾರೆ.
ರೆಡ್ಡಿ ಸಹೋದರರೊಂದಿಗೆ ನಾನು ಗುರುತಿಸಿಕೊಂಡಿದ್ದೇನೆ ಮತ್ತು ನೈತಿಕವಾಗಿಯೇ ಅವರೊಂದಿಗಿದ್ದೇನೆ. ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ, ಒಳಿತನ್ನೇ ಮಾಡುವಂಥವರೊಂದಿಗೆ ನಾನಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ ಎಂದು ನಾಯಕ್ ಹೇಳಿದ್ದಾರೆ. ಅವರು ಶುಕ್ರವಾರ (ಅ 30 ) ದೇವದುರ್ಗ ತಾಲ್ಲೂಕಿನ ಮ್ಯಾದರಗೋಳ ಗ್ರಾಮದಲ್ಲಿ ನೆರೆ ಹಾವಳಿ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಗ್ರಾಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications