ಮೈಸೂರಿನಲ್ಲಿ ವಿಂಡೋಸ್ 7 ಸಂಭ್ರಮಾಚರಣೆ

ಈ ಸಂಭ್ರಮವನ್ನು ಟೆಕ್ನಾಲಜಿ ಫಾರ್ ಕಾಮನ್ ಮ್ಯಾನ್, ಮೈಸೂರು/ಮಂಡ್ಯ ಟೆಕ್ನಾಲಜಿ ಯೂಸರ್ ಗ್ರೂಪ್ ಮತ್ತು ಮೆರಾವಿಂಡೋಸ್.ಕಾಂ ಸಂಘಟನೆ ಮತ್ತು ಸಂಸ್ಥೆಗಳ ಸಂಯೋಗ ಶನಿವಾರ ಸಂಜೆ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಆಚರಿಸುತ್ತಿವೆ.
ಮಾನಸಗಂಗೋತ್ರಿಯಲ್ಲಿರುವ ಜೆಎಸ್ಎಸ್ ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆವರಣದಲ್ಲಿ ಸಂಜೆ 5ರಿಂದ 8ರವರೆಗೆ ವಿಂಡೋಸ್ 7 ಪ್ರಿಯರು ಸಂಭ್ರಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಮೈಸೂರಿನ ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ ಪ್ರಾಯೋಜಿಸುತ್ತಿದೆ.
ಈ ಸಂದರ್ಭದಲ್ಲಿ ಸಾಮಾನ್ಯ ಕಂಪ್ಯೂಟರ್ ಬಳಕೆದಾರರ ತಿಳಿವಳಿಕೆಗಾಗಿ ವಿಂಡೋಸ್ 7 ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಗುವುದು. ವಿಂಡೋಸ್ 7 ಇನ್ ಸ್ಟಾಲೇಶನ್ ಕೂಡ ಮಾಡಿಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದೆ. ಇದರ ಲಾಭ ಜನರು ಪಡೆದುಕೊಳ್ಳಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ಪವನಜ : 9902633113, ರಾಹುಲ್ ನಾಥನ್ : 9341921581, ರವಿಚಂದ್ರನ್ : 9611120868 ಅವರನ್ನು ಸಂಪರ್ಕಿಸಬಹುದು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications