ಮಹಾರಾಷ್ಟ್ರ : ಚವಾಣ್ ಸಿಎಂ ಆಗುವ ಸಾಧ್ಯತೆ

ಕಳೆದ ಒಂಬತ್ತು ತಿಂಗಳಲ್ಲಿ ಉತ್ತಮ ಆಡಳಿತ ನೀಡಿರುವುದು ಒಂದೆಡೆಯಾದರೆ, ವಿವಾದಾತೀತ ವ್ಯಕ್ತಿ ಎನ್ನುವ ಅಂಶ ಅಶೋಕ್ ಚವಾಣ್ ಅವರ ಕೈಹಿಡಿಯಲು ಸಹಕಾರಿಯಾಗಿದೆ. ಗಾಂಧಿ ಮನೆತನದ ಕಟ್ಟಾ ಬೆಂಬಲಿಗರ ಪಟ್ಟಿಯಲ್ಲಿ ಚವಾಣ್ ಅವರ ಹೆಸರು ಮುಂಚೂಣಿಯಲ್ಲಿರುವುದರಿಂದ ಮುಖ್ಯಮಂತ್ರಿ ಗಾದಿಗೆ ಏರುವುದು ಬಹುತೇಕ ಖಚಿತ ಎನ್ನುತ್ತದೆ ಮಹಾರಾಷ್ಟ್ರ ಕಾಂಗ್ರೆಸ್ ಒಂದು ವಲಯ.
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್, ನಾರಾಯಣ ರಾಣೆ ಅವರ ಹೆಸರು ಭಾರಿ ಚಾಲ್ತಿಯಲ್ಲಿವೆ. ಫಲಿತಾಂಶ ಹೊರಬಿದ್ದ ನಂತರ ಪ್ರತಿಕ್ರಿಯೆ ನೀಡಿದ್ದ ದೇಶಮುಖ್, ಮುಖ್ಯಮಂತ್ರಿಯಾಗಲು ಶಾಸಕರಾಗಿರಬೇಕು ಎನ್ನುವ ನಿಯಮವೇನೂ ಇಲ್ಲ. ಯಾರಾದರೂ ಆಗಬಹುದು. ಒಟ್ಟಿನಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದ್ದರು.
(ಏಜನ್ಸೀಸ್)












Click it and Unblock the Notifications