ನೆರೆ ಪ್ರದೇಶಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ

KS Eshwarappa
ರಾಯಚೂರು, ಅ. 22 : ನೆರೆ ಹಾವಳಿಯಿಂದ 3000 ಟ್ರಾನ್ಸಫಾರ್ಮರುಗಳು ಹಾಳಾಗಿದ್ದು, ಈಗಾಗಲೆ ಶೇ 80 ರಷ್ಟನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ರಾಯಚೂರು ಶಾಖೋತ್ಪನ್ನ ವಿದ್ಯುತ್ ನಿಗಮದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 16000 ಕಂಬಗಳು ಹಾಳಾಗಿದ್ದು, ಹತ್ತು ಸಾವಿರ ಕಂಬಗಳನ್ನು ಹಾಕಲಾಗಿದೆ. ಈ ಭಾಗದ ಬತ್ತದ ಬೆಳೆಗಳ ನೀರಾವರಿ ಪಂಪಸೆಟ್ಟುಗಳಿಗಾಗಿ ವಿದ್ಯುತ್, ಹಾಗೂ ಕುಡಿಯುವ ನೀರಿನ ಘಟಕಗಳು, ಗಂಜಿ ಕೇಂದ್ರಗಳಿಗೆ ಅಭಾದಿತ ವಿದ್ಯುತ್ ನೀಡಲಾಗುವದೆಂದು ಭರವಸೆ ನೀಡಿದರು.

ಪ್ರತಿ ಜಿಲ್ಲೆಗೆ 5 ಲಕ್ಷ ರೂಗಳನ್ನು ಒದಗಿಸಲಾಗಿದ್ದು, ಅದರಲ್ಲಿ ನಷ್ಟವಾಗಿರುವ ಟ್ರಾನ್ಸ್‌ಪಾರ್ಮರ ಹಾಗು ಕಂಬಗಳ ಖರೀದಿಗಾಗಿ ನೀಡಲಾಗಿದೆ. ನೆರೆ ಹಾವಳಿಯಿಂದ ತೊಂದರೆಗೀಡಾಗಿರುವ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಶೇಷ ತಂಡಗಳನ್ನು ಸಹ ರಚಿಸಲಾಗಿದೆ. ಹಾಗೂ ನೆರೆ ಹಾವಳಿಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ವಿದ್ಯುತ್ ತೆರಿಗೆಯನ್ನು ರದ್ದುಗೊಳಿಸಲಾಗುತ್ತಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5 ಘಟಕಗಳು ಕಾರ್ಯ ನಿರ್ವಸುತ್ತಿದ್ದು, ಯಾವುದೇ ಕಾರಣಕ್ಕೂ ಲೋಡ್ ಶೆಡಿಂಗ್ ಜಾರಿಗೊಳಿಸುವುದಿಲ್ಲವೆಂದು ಸಚಿವ ಈಶ್ವರಪ್ಪ ಅವರು ತಿಳಿಸಿದರು. ಇದಕ್ಕಾಗಿ ವಿದ್ಯುತ್ ಉತ್ಪಾದನೆಗೆ ಕ್ರಮ ಜರುಗಿಸಲಾಗುವದು ಎಂದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+