ವಾತಾವರಣ ಬದಲಾವಣೆ ವಿರುದ್ಧ ಭಾರತ, ಚೀನಾ ಯುದ್ಧ

ಅಂತಾರಾಷ್ಟ್ರೀಯ ವಾತಾವರಣ ಕುರಿತಾದ ಒಪ್ಪಂದದ ವಿಚಾರದಲ್ಲಿ ಭಾರತ ಮತ್ತು ಚೀನಾ ವಿರುದ್ಧ ದಾರಿಯನ್ನು ತುಳಿಯುವುದಿಲ್ಲ ಎಂದು ಪರಿಸರ ಸಚಿವ ಜೈರಾಮ್ ರಮೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಕೋಪನ್ ಹೇಗನ್ ನಲ್ಲಿ ನಡೆಯಲಿರುವ ವಾತಾವರಣ ಶೃಂಗಸಭೆಯಲ್ಲಿ ಭಾರತ ಮತ್ತು ಚೀನಾ ಒಂದೇ ಧಾಟಿಯಲ್ಲಿ ಮಾತನಾಡುವಂತಾಗಬೇಕು. ಈ ನಿಟ್ಟಿನಲ್ಲಿ ತಾವು ಚೀನಾದ ಪರಿಸರ ಮಂತ್ರಿ ಕ್ಸೀ ಜೆನೂಹ ಅವರ ಜತೆ ಪೂರ್ವಭಾವಿ ಚರ್ಚೆ ನಡೆಸುವುದಾಗಿಯೂ ರಮೇಶ್ ಹೇಳಿದರು.
ವಾತಾವರಣ ಬದಲಾವಣೆ ವಿರುದ್ಧ ಸಂಘಟಿತ ಹೋರಾಟ ನಡೆಸುವ ರಾಷ್ಟ್ರಗಳ ವರ್ತುಲದಲ್ಲಿ 77 ದೇಶಗಳಿವೆ. ಚೀನಾ ಮತ್ತು ಭಾರತ ಒಂದೇ ಚೌಕಟ್ಟಿನಲ್ಲಿ ಬರುವಂಥ ದೇಶಗಳಾಗಿದ್ದು ಉಭಯ ದೇಶಗಳು ವಾತಾವರಣ ವಿಷಯದಲ್ಲಿ ಸಮಾನಮನಸ್ಕರಾಗಬೇಕಾಗಿರುವುದು ಅವಶ್ಯವಾಗಿದೆ. ಎರಡೂ ದೇಶಗಳ ವಿಜ್ಞಾನಿಗಳು ಪರಿಸರ ಕುರಿತ ಅಧ್ಯಯನ ಮತ್ತು ಸಂಶೋಧನೆಗಳನ್ನು ಜತೆಜತೆಯಾಗಿ ಕೈಗೊಳ್ಳುವ ಸಂಭವವಿದೆ.
( ದಟ್ಸ್ ಕನ್ನಡ ವಾರ್ತೆ)












Click it and Unblock the Notifications